ಬೆಂಗಳೂರು: 'ಲವ್ ಯು ರಚ್ಚು' ಸಿನಿಮಾ ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣ ಆರೋಪಿಗಳಾದ ನಿರ್ಮಾಪಕ ಗುರುದೇಶ ಪಾಂಡೆ ಹಾಗೂ ಸಿನಿಮಾ ಇನ್ಚಾರ್ಜ್ ಪರ್ನಾಂಡೀಸ್ ನಾಪತ್ತೆಯಾಗಿದ್ದಾರೆ.
ಶೂಟಿಂಗ್ ದುರಂತದ ಸಂಬಂಧ ಬಿಡದಿ ಪೊಲೀಸರು ಸಿನಿಮಾ ನಿರ್ದೇಶಕ ಶಂಕರ್ ರಾಜ್ A1, ನಿರ್ಮಾಪಕ ಗುರುದೇಶ ಪಾಂಡೆ A2, ಸಾಹಸ ನಿರ್ದೇಶಕ ವಿನೋದ್ A3, ಸಿನಿಮಾ ಇನ್ಚಾರ್ಜ್ ಪರ್ನಾಂಡೀಸ್ A4, ಕ್ರೇನ್ ಆಪರೇಟರ್ ಮಹೇದವರ್ A5 ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇನ್ನೇನು ವಿಚಾರಣೆ ಶುರು ಮಾಡಬೇಕು ಎನ್ನುವಾಗಲೇ ಪ್ರಮುಖ ಆರೋಪಿಗಳಾದ ನಿರ್ಮಾಪಕ ಗುರುದೇಶ್ ಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ಆರೋಪಿಗಳನ್ನು ಇಂದು ಪೊಲೀಸರು ಕೋರ್ಟ್ ಮುಂದೆ ಹಾಜರು ಮಾಡಲು ಮುಂದಾಗಿದ್ದಾರೆ. ಆದರೀಗ ಮೂವರನ್ನು ಬಂಧಿಸಿದ್ದು, ನಾಪತ್ತೆಯಾದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
PublicNext
10/08/2021 11:41 am