ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಅವರು ಜೈಲಿನಲ್ಲಿ ಸೊಳ್ಳೆ ಕಾಟಕ್ಕೆ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆಂದು ಎಂದು ತಿಳಿದುಬಂದಿದೆ.
ಐಷಾರಾಮಿಯಾಗಿದ್ದ ನಟಿಮಣಿಯರು ಈಗ ಜೈಲು ವಾಸ ಅನುಭವಿಸುತ್ತಿದ್ದಾರೆ, ರಾಗಿಣಿ ಜೈಲು ಸೇರಿ 4ನೇ ದಿನಗಳಾಗಿದ್ದರೆ, ಸಂಜನಾ ಜೈಲುವಾಸ ಒಂದು ದಿನ ಪೂರೈಸಿದೆ. ಈಗ ಸಂಜನಾರಾಗಿಣಿ ಇಬ್ಬರು ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ 2 ಗಂಟೆ ತನಕ ನಟಿ ಸಂಜನಾ ನಿದ್ದೆ ಮಾಡದೇ ರಂಪಾಟ ತೆಗೆದಿದ್ದಾರೆ. ಸೊಳ್ಳೆ ಕಚ್ಚುತ್ತಿದೆ, ನಿದ್ದೆ ಬರ್ತಿಲ್ಲ, ತಲೆ ನೋವು ಜಾಸ್ತಿ ಆಗಿದೆ, ಟ್ರೀಟ್ಮೆಂಟ್ ಕೊಡಿಸಿ ಎಂದು ಮಧ್ಯರಾತ್ರಿ ಕಿರುಚಾಡಿದ್ದಾರೆ. ಈ ವೇಳೆ, ನಟಿ ರಾಗಿಣಿ, ಸಂಜನಾರನ್ನು ಸಂತೈಸಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದು, ಸೊಳ್ಳೆ ಪರದೆ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಜೈಲಿನಲ್ಲಿ ಅಂತಹ ವ್ಯವಸ್ಥೆಗಳನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಿರಾಕರಿಸಿದ ಕಾರಣ ಸಂಜನಾ ನಿದ್ದೆ ಇಲ್ಲದೆ ರಾತ್ರಿ ಕಳೆದಿದ್ದಾರೆಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಇಬ್ಬರು ನಟಿಯರು ಈಗ ಜೈಲಲ್ಲಿ ಪಡಬಾರದ ಪಾಡು ಪಡ್ತಿದ್ದಾರೆ. ಇದರ ಮಧ್ಯೆ ಇಬ್ಬರ ಒಂದೊಂದೇ ಸೀಕ್ರೆಟ್ ಬಯಲಾಗ್ತಿದ್ದು, ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ.
PublicNext
18/09/2020 01:18 pm