ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ರಾಣಿಯರಿಗೆ ಜಾಮೀನು ಸಿಗೋದು ಡೌಟು

ಬೆಂಗಳೂರು-ಸ್ಯಾಂಡಲ್​​ವುಡ್ ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿಯರಾದ ಸಂಜನಾ ಗಲ್ರಾಣಿ ಹಾಗೂ ರಾಗಿಣಿ ದ್ವಿವೇದಿ ನವೆಂಬರ್ 2ರವರೆಗೂ ಜೈಲುವಾಸ ಫಿಕ್ಸ್ ಆಗಿದೆ‌.

ಈ ಪ್ರಕರಣದಲ್ಲಿ ಜೈಲು ಪಾಲಾಗಿರುವ ರಾಗಿಣಿ, ಸಂಜನಾ ಹಾಗೂ ಇನ್ನಿತರೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ಎನ್​​​​ಡಿಪಿಎಸ್ ವಿಚಾರಣಾ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.

ಈ ಹಿನ್ನೆಲೆ ಆರೋಪಿಗಳೆಲ್ಲರೂ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ, ತೀರ್ಪು ಕಾಯ್ದಿರಿ ಸಿದೆ.

ಈ ನಡುವೆ ನವೆಂಬರ್ 2ರವರೆಗೂ ಹೈಕೋರ್ಟ್​ಗೆ ದಸರಾ ರಜೆ ಇದೆ. ಇದರ ನಡುವೆ ಅಕ್ಟೋಬರ್ 29ರಂದು ರಜೆ ಕಾಲದ ಪೀಠಗಳು ಕಾರ್ಯ ನಿರ್ವಹಿಸಲಿವೆ.

Edited By : Nagaraj Tulugeri
PublicNext

PublicNext

28/10/2020 06:59 pm

Cinque Terre

75.75 K

Cinque Terre

13

ಸಂಬಂಧಿತ ಸುದ್ದಿ