ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಗನಸಖಿಗೆ ಲೈಂಗಿಕ ಕಿರುಕುಳ ಆರೋಪ: ಕೇಸ್ ಮುಚ್ಚಲು ಎಲಾನ್ ಮಸ್ಕ್ ಮಾಡಿದ್ದೇನು?

ವಾಷಿಂಗ್ಟನ್: ಟೆಸ್ಲಾ ಕಂಪನಿ ಸಿಇಒ ಹಾಗೂ ಜಾಗತಿಕ ಮಟ್ಟದ ಉದ್ಯಮಿ ಎಲಾನ್ ಮಸ್ಕ್ ಅವರು ಗಗನ ಸಖಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣದ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಸುಮ್ಮನಿರಲು ಮಸ್ಕ್‌ ಅವರು ಗಗನಸಖಿಗೆ ಬರೋಬ್ಬರಿ 2,50,000 ಡಾಲರ್ (ಸುಮಾರು 1.94 ಕೋಟಿ ರೂ.) ನೀಡಿದ್ದಾರೆ ಎನ್ನಲಾಗಿದೆ. 2016ರಲ್ಲಿ ಈ ಘಟನೆ ನಡೆದಿದೆ. ಆದರೆ ತಮ್ಮ ಮೇಲಿನ ಈ ಆರೋಪವನ್ನು ಎಲಾನ್ ಮಸ್ಕ್ ತಳ್ಳಿ ಹಾಕಿದ್ದಾರೆ.

ಎಲೋನ್ ಮಸ್ಕ್ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಿರುವಾಗ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರಲಾಗಿದ್ದು, ಈ ಘಟನೆಯನ್ನು ಇತ್ಯರ್ಥ ಮಾಡಿಕೊಳ್ಳಲು ಸ್ಪೇಸ್‌ಎಕ್ಸ್ ಕಂಪನಿ ಆಕೆಗೆ 2018ರಲ್ಲಿ 2,50,000 ಡಾಲರ್ ನೀಡಿರುವುದಾಗಿ ಬಿಜಿನೆಸ್ ಇನ್‌ಸೈಡರ್ ವರದಿ ಮಾಡಿತ್ತು. ವರದಿಯಲ್ಲಿ ಗಗನಸಖಿಯ ಸ್ನೇಹಿತೆ ಎಂದು ಹೇಳಿಕೊಂಡ ಅನಾಮಧೇಯ ವ್ಯಕ್ತಿಯ ಹೇಳಿಕೆ ಎಂಬುದಾಗಿ ಉಲ್ಲೇಖಿಸಲಾಗಿತ್ತು.

ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಸ್ಕ್, ಇದು ಶುದ್ಧ ಸುಳ್ಳು. ಇದು ರಾಜಕೀಯ ಪ್ರೇರಿತ ವರದಿ. ಒಂದು ವೇಳೆ ನಾನು ಈ ರೀತಿ ಮಾಡಿದ್ದರೆ, ನನ್ನ ಸಂಪೂರ್ಣ 30 ವರ್ಷಗಳ ವೃತ್ತಿ ಜೀವನದಲ್ಲಿ ಬೆಳಕಿಗೆ ಬರುತ್ತಿರುವ ಮೊದಲ ಆರೋಪವಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

20/05/2022 07:57 pm

Cinque Terre

72.54 K

Cinque Terre

1