ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣು ಕಂದಮ್ಮನನ್ನ ಬಟ್ಟೆಯಲ್ಲಿ ಸುತ್ತಿ ಬೇಲಿಗೆ ಎಸೆದ ಕ್ರೂರಿಗಳು

ಹಾಸನ: ಅನೇಕರು ತಮಗೆ ಹೆಣ್ಣು ಮಕ್ಕಳು ಆಗಲಿಲ್ಲ ಎಂದು ಮರುಗುತ್ತಾರೆ. ಆದರೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ವಿದ್ಯಾನಗರ ಸಮೀಪದಲ್ಲಿ ಕ್ರೂರಿ ಪೋಷಕರು ಸುಮಾರು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಬೇಲಿಗೆ ಎಸೆದು ಹೋಗಿರುವ ಘಟನೆ ನಡೆದಿದೆ.

ಬೇಲಿಯ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಕಂದಮ್ಮ ಚಳಿ ಮತ್ತು ಹಸಿವು ತಾಳಲಾರದೆ ಜೋರಾಗಿ ಅಳುತ್ತಿತ್ತು. ಇದನ್ನು ಕೇಳಿಸಿಕೊಂಡ ಸ್ಥಳೀಯ ನಿವಾಸಿ ತಮನ್ನಾ ಮಗುವನ್ನು ಮನೆಗೆ ಕರೆತಂದು ಹಾಲು ಕುಡಿಸಿ ಪೋಷಣೆ ಮಾಡಿದ್ದಾರೆ. ಈ ಕುರಿತು ಮಾಹಿತಿ ಪಡೆದ ಪತ್ರಕರ್ತರೊಬ್ಬರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದಿದ್ದು, ಯಾರಿಗಾದರೂ ಮಗುವಿನ ಪೋಷಕರ ಬಗ್ಗೆ ತಿಳಿದಿದ್ದರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

Edited By : Vijay Kumar
PublicNext

PublicNext

25/12/2020 09:03 am

Cinque Terre

83.02 K

Cinque Terre

14