ತಿರುವನಂತಪುರಂ : ಮೃಗದಂತೆ ವರ್ತಿಸಿದ ತಂದೆಯೋರ್ವ ತನ್ನ ಕರುಳ ಕುಡಿ ಎಂದು ಲೆಕ್ಕಿಸದೇ ಮಗಳು ಪ್ರಜ್ಞೆ ತಪ್ಪುವಂತೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ.
ಕೇವಲ ಏಳು ವರ್ಷದ ಮಗಳನ್ನು ಹೀಗೆ ಥಳಿಸಿದ ತಂದೆ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ತಂದೆಯನ್ನು ರಾಜೇಶ್(41) ಎಂದು ಗುರುತಿಸಲಾಗಿದೆ. ಈತ ಚಿರಾಯಿಂಕಿಜು ನಿವಾಸಿ.
ರಾಜೇಶ್ ಹಾಗೂ ಪತ್ನಿ ನಡುವೆ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಮನಸ್ತಾಪ ಇದ್ದು, ಮಾತುಕತೆ ಇರಲಿಲ್ಲ.
ಮಕ್ಕಳು ಕೂಡ ತಾಯಿ ಜೊತೆ ಬೇರೆಯಾಗಿ ವಾಸಿಸುತ್ತಿದ್ದರು. ಈ ಮಧ್ಯೆ ಒಂದು ದಿನ ರಾಜೇಶ್ ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ.
ಮನೆಗೆ ಕರೆದುಕೊಂಡು ಬಂದ ಬಳಿಕ ರಾಜೇಶ್ ಕಂಠಪೂರ್ತಿ ಕುಡಿದು ಬಂದು ಮಗಳಿಗೆ ಚಪ್ಪಲಿಯಲ್ಲಿ ಚೆನ್ನಾಗಿ ಥಳಿಸಿದ್ದಾನೆ.
ಪರಿಣಾಮ ಗಾಯಗೊಂಡ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ.
ಇದನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇತ್ತ ಆಸ್ಪತ್ರೆ ಸಿಬ್ಬಂದಿ ಚೈಲ್ಡ್ ಲೈನ್ ಹಾಗೂ ಕಡಕ್ಕವೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
23/12/2020 12:03 pm