ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕಿ ಮೇಲೆ ಅತ್ಯಾಚಾರ: ಕಾಮುಕ ಆರೋಪಿ ಅರೆಸ್ಟ್

ನೆಲಮಂಗಲ: ಟ್ಯೂಷನ್​​ಗೆ ಹೋಗುತ್ತಿದ್ದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರ ನಡೆಸಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಕಾಮುಕ ರವಿಕಿರಣ್ @ಕಿರಣ್ (26) ಎಂಬಾತನನ್ನ ಪೊಲೀಸರು ಪೋಕ್ಸೋ ಕಾಯ್ದೆಯಡಿ ಅರೆಸ್ಟ್ ಮಾಡಿದ್ದಾರೆ.

ಆರೋಪಿಯ ಪತ್ನಿ ಬಳಿ ಟ್ಯೂಷನ್​ಗೆ ಬರುತ್ತಿದ್ದ ಎಸ್​ಎಸ್​ಎಲ್​ಸಿ ಓದುವ ಬಾಲಕಿ ಮೇಲೆ ರವಿಕಿರಣ್ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಮಗಳ ಮೇಲೆ ಅತ್ಯಾಚಾರವಾಗಿದ್ದರೂ ಮರ್ಯಾದೆಗೆ ಅಂಜಿ ಸಂತ್ರಸ್ತ ಬಾಲಕಿಯ ಪೋಷಕರು ಗೌಪ್ಯತೆ ಕಾಪಾಡಿಕೊಂಡಿದ್ದರು.

ಆದರೆ, ಆರೋಪಿಯು ತಾನು ಎಸಗಿದ ಅತ್ಯಾಚಾರ ಕೃತ್ಯವನ್ನ ಸ್ನೇಹಿತರ ಮುಂದೆ ಬಾಯ್ಬಿಟ್ಟಿದ್ದಾನೆ. ಇದರಿಂದ ಮನನೊಂದ ಸಂತ್ರಸ್ಥೆಯ ಪೋಷಕರು ಮಾದನಾಯಕನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಪಡೆದ ಪೊಲೀಸರು ಆರೋಪಿಯನ್ನ ಪೋಕ್ಸೋ ಅಡಿ ಬಂಧಿಸಿ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ. ವರ್ಷದ ಹಿಂದೆ ಆರೋಪಿ ಕೆಂಗೇರಿ ಠಾಣೆಯಲ್ಲಿ ದರೋಡೆ ಕೇಸ್​​ನಲ್ಲಿ ಬಂಧನವಾಗಿದ್ದ ಎಂಬುದು ತಿಳಿದುಬಂದಿದೆ.

Edited By : Nagaraj Tulugeri
PublicNext

PublicNext

16/12/2020 03:15 pm

Cinque Terre

77.76 K

Cinque Terre

6