ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂಜಾಟದಲ್ಲಿ ಧರ್ಮಪತ್ನಿಯನ್ನೇ ಅಡವಿಟ್ಟು ಸೋತ ಪತಿರಾಯ

ಪಾಟ್ನ: ಜೂಜಾಟ ರುಚಿ ಹತ್ತಿದರೆ ವ್ಯಕ್ತಿ ಮನೆ ಮಠ ಮಾರಲು ಹಿಂದೆಟು ಹಾಕಲ್ಲಾ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.

ಇಲ್ಲೊಬ್ಬ ಪತಿ ಪತ್ನಿಯನ್ನೇ ಅಡವಿಟ್ಟು ಸೋತಿದ್ದಾನೆ.

ಜೂಜಾಟದಲ್ಲಿ ಸೋತ್ತಿದ್ದು ಅಲ್ಲದೆ ಆಕೆಯ ಮೇಲೆ ಆ್ಯಸಿಡೆ ಎರಚಿ ವಿಕೃತಿ ಮೆರೆದಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.

ಜೂಜಾಟದಲ್ಲಿ ಪತ್ನಿಯನ್ನು ಇಟ್ಟ ಬಳಿಕ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಬಲವಂತ ಮಾಡಿದ್ದಾನೆ.

ಇದಕ್ಕೆ ಮಹಿಳೆ ನಿರಾಕರಿಸಿದ ಕಾರಣ ಆಕೆಯ ಮೇಲೆ ಆ್ಯಸಿಡ್ ಎರಚಿಸಿದ್ದಾನೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಆರೋಪಿ ಸೋನಿ ಹರಿಜಾನ್ ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದ್ದು, ಆತನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮೊಜಾಹಿದ್ ಪುರ್ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಕುಮಾರ್ ಜಾ ಅವರು ಹೇಳಿದ್ದಾರೆ.

ನಿಯಮದಂತೆ ತಿಂಗಳವರೆಗಿ ಹರಿಜಾನ್ ಪತ್ನಿಯನ್ನು ಗೆದ್ದ ವ್ಯಕ್ತಿಗಳಿಗೆ ನೀಡಬೇಕಿತ್ತು. ಆದರೆ, ಹರಿಜಾನ್ ಪತ್ನಿ ಇದಕ್ಕೆ ನಿರಾಕರಿಸಿದ್ದರು.

ಈ ವೇಳೆ ಹರಿಜಾನ್ ಆ್ಯಸಿಡ್ ದಾಳಿ ನಡೆಸಿದ್ದಾನೆಂದು ತಿಳಿದುಬಂದಿದೆ.

Edited By : Nirmala Aralikatti
PublicNext

PublicNext

15/12/2020 04:55 pm

Cinque Terre

38.88 K

Cinque Terre

1