ಹುಬ್ಬಳ್ಳಿ: ಪರಿಚಯಸ್ಥ ಯುವತಿಗೆ ಡ್ರಾಪ ಕೊಡುವ ನೆಪದಲ್ಲಿ ನಿರ್ಜನ್ಯ ಪ್ರದೇಶಕ್ಕೆ ಕರೆದೊಯ್ದ ಲೈಂಗಿಕ ದೌರ್ಜನ್ಯ ನೀಡಿದ ಅಮಾನವೀಯ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೌದು..ಹುಬ್ಬಳ್ಳಿ ಹೊರವಲಯದ ಕಾರವಾರ ರಸ್ತೆಯ ಹೇಸಿಗೆ ಮಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ ವಾಪಸ ಯುವತಿಯನ್ನು ಕರೆದುಕೊಂಡು ಹೊಗುವ ವೇಳೆ ಬೈಕ್ ಅಪಘಾತದಲ್ಲಿ ಯುವತಿ ಆಸ್ಪತ್ರೆಗೆ ದಾಖಲಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
19 ವರ್ಷದ ಯುವತಿ ಅತ್ಯಾಚಾರಕ್ಕೀಡಾಗಿದ್ದು,ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದ ಮಲ್ಲಿಕಜಾನ್ ಬಗಡಗೇರಿ ಎನ್ನುವ ಯುವಕ ಅತ್ಯಾಚಾರ ಎಸಗಿ ಪೊಲೀಸರು ಅತಿಥಿಯಾಗಿದ್ದಾನೆ.
ಯುವತಿಯ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು. ಘಟನೆ ನಡೆದ ಸ್ಥಳ ಗ್ರಾಮೀಣ ಠಾಣೆಯ ವ್ಯಾಪ್ತಿಗೆ ಬರೋ ಹಿನ್ನೆಲೆಯಲ್ಲಿ ಪ್ರಕರಣವನ್ನ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದ್ದು. ಬೈಕ್ ಅಪಘಾತ ಪ್ರಕರಣದ ಕುರಿತು ಉತ್ತರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ಹಿನ್ನೆಲೆ: ನವಂಬರ್ 30ರಂದು ಮಾವನೂರ ಗ್ರಾಮಕ್ಕೆ ತೆರಳಲೆಂದು ಹುಬ್ಬಳ್ಳಿಯ ಬಾಸಲ್ ಮಿಶನ್ ಚರ್ಚ ಬಳಿ ನಿಂತಿದ್ದಳು. ಈ ವೇಳೆ ಬೈಕ್ ನಲ್ಲಿ ಆಗಮಿಸಿದ ಮಲ್ಲಿಕಜಾನ್ ಹಾಗೂ ಆಸೀಫ್ ಡ್ರಾಪ್ ಕೊಡುವುದಾಗಿ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದರು. ಹಳೇ ಹುಬ್ಬಳ್ಳಿ ದುರ್ಗದ ಬೈಲ್ ಗೆ ಬಿಡುವ ಬದಲು ಮಲ್ಲಿಕಜಾನ್ ಯುವತಿಯನ್ನು ಕಾರವಾರ ರಸ್ತೆ ಕಡೆಗೆ ಕರೆದುಕೊಂಡು ಹೋಗುವ ವೇಳೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಆಸೀಫ್ ಮತ್ತೊಂದು ಬೈಕ್ ತರುವುದಾಗಿ ಇಳಿದುಹೋಗಿದ್ದ. ನಂತರ ಮಲ್ಲಿಕಜಾನ್ ಯುವತಿಯನ್ನ ಹೇಸಿಗೆ ಮಡ್ಡಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಯುವತಿಯನ್ನು ಮರಳಿ ವಾಪಸ್ ಕರೆದುಕೊಂಡು ಬರುವ ವೇಳೆ ಆಯತಪ್ಪಿ ಬೈಕ್ ಮೇಲಿಂದ ಬಿದ್ದ ಪರಿಣಾಮ ಯುವತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
PublicNext
12/12/2020 11:16 am