ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವ ಉದ್ಯಮಿ ಆತ್ಮಹತ್ಯೆಗೆ ಶರಣು: ಐ ಲವ್ ಯೂ ನೀಲಂ

ಭೋಪಾಲ್:ಗಿನ್ನಿಸ್ ದಾಖಲೆ ಮಾಡಿದ್ದರು ಎನ್ನಲಾದ 28 ವರ್ಷದ ಯುವ ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಉದ್ಯಮಿ ಬರೆದಿಟ್ಟದ್ದ ಡೈರಿ ಲಭ್ಯವಾಗಿದೆ. ಅದರಲ್ಲಿ ಐ ಲವ್ ಯು ನೀಲಂ ಎಂದು ಬರೆಯಲಾಗಿದ್ದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ.

28 ವರ್ಷದ ಪಂಕಜ್ ಆತ್ಮಹತ್ಯೆಗೆ ಶರಣಾದ ಯುವ ಉದ್ಯಮಿ. ಇಂದೋರ್ ನಗರದ ಕನಾಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ನಲ್ಲಿ ಪಂಕಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪಂಕಜ್ ಮುಂಬೈನಲ್ಲಿ ನಾಲ್ಕು ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ಮಾಲೀಕರಾಗಿದ್ದು, ಇವರ ಹೆಸರು ಗಿನ್ನಿಸ್ ಬುಕ್ ನಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.

ರಾಜಕೀಯ ಮುಖಂಡ ಸಂಜಯ್ ಶುಕ್ಲಾ ಮಗನ ಮದುವೆ ಆಯೋಜಿಸಲು ಪಂಕಜ್ ಇಂದೋರ್ ಗೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಮದುವೆ ಕೆಲಸ ಮಾಡಿದ್ದ ಪಂಕಜ್, ಸುಸ್ತಾಗಿದೆ ಎಂದು ಹೋಟೆಲ್ ಗೆ ತೆರಳಿದ್ದರು. ಬೆಳಗ್ಗೆ ಬಂದ ಸಿಬ್ಬಂದಿ ಕೋಣೆಯ ಬಾಗಿಲು ತೆಗೆದಾಗ ನೇಣು ಬಿಗಿದು ಸ್ಥಿತಿಯಲ್ಲಿ ಪಂಕಜ್ ಶವ ಪತ್ತೆಯಾಗಿದೆ.

Edited By : Nagaraj Tulugeri
PublicNext

PublicNext

11/12/2020 04:12 pm

Cinque Terre

65.22 K

Cinque Terre

5