ಬೆಂಗಳೂರು: ಡ್ರಗ್ ಡೀಲ್ ಮಾಡಿದ್ದರೆಂಬ ಆರೋಪದ ಮೇಲೆ ಕೆಳದ ಮೂರು ತಿಂಗಳಿಂದ ಜೈಕು ಹಕ್ಕಿಯಾಗಿರುವ ಸ್ಯಾಂಡಲ್ ವುಡ್ 'ಮಾದಕ' ನಟಿ ರಾಗಿಣಿಗೆ ಇವತ್ತು ರಿಲೀಫ್ ಸಿಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಸುಪ್ರೀಂಕೋರ್ಟಿನ ನ್ಯಾ. ರೊಹ್ನಿಂಟನ್ ನಾರಿಮನ್ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಬೆಳಗ್ಗೆ ಹನ್ನೊಂದು ಗಂಟೆಯ ಬಳಿಕ ಈ ಅರ್ಜಿ ವಿಚಾರಣೆಗೆ ಬರುವ ನಿರೀಕ್ಷೆಗಳಿವೆ.
ಈಗಾಗಲೇ ಸುಶಾಂತ್ ಸಿಂಗ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರನಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದು, ಈ ಹಿನ್ನಲೆ ತುಪ್ಪದ ಹುಡುಗಿಗೂ ಜಾಮೀನು ಸಿಗುವ ಆಸೆ ಚಿಗುರುದೊಡಿದಿದೆ. ಹೀಗಾಗಿ ಸೆಪ್ಟೆಂಬರ್ 16 ರಿಂದ ಜೈಲಿನಲ್ಲಿರುವ ರಾಗಿಣಿ ದ್ವಿವೇದಿಗೆ ಇಂದು ನಡೆಯಲಿರುವ ಅರ್ಜಿ ವಿಚಾರಣೆ ಮಹತ್ವದಾಗಿದೆ.
PublicNext
04/12/2020 09:04 am