ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರು ಕುಡಿಯುತ್ತಿದ್ದ ಆರು ಜನರಲ್ಲಿ ಓರ್ವ ಬಾಲಕನನ್ನ ಎಳೆದೊಯ್ದ ಮೊಸಳೆ

ರಾಯಚೂರು: ನದಿಯಲ್ಲಿ ನೀರು ಕುಡಿಯುತ್ತಿದ್ದ ಆರು ಜನರ ಪೈಕಿ ಓರ್ವ ಬಾಲಕನನ್ನ ಮೊಸಳೆ ಎಳೆದೊಯ್ದ ಘಟನೆ ರಾಯಚೂರು ತಾಲೂಕಿನ ಡೊಂಗರಾಂಪುರ ಬಳಿ ಕೃಷ್ಣ ನದಿಯಲ್ಲಿ ನಡೆದಿದೆ.

ಮಲ್ಲಿಕಾರ್ಜುನ್ (12) ಮೊಸಳೆ ಎಳೆದೊಯ್ದ ಬಾಲಕ. ಮಲ್ಲಿಕಾರ್ಜುನ್ ಇಂದು ಗೆಳೆಯರ ಜೊತೆ ದನಗಳನ್ನ ಮೇಯಿಸಲು ಹೋಗಿದ್ದ. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಐವರು ಸ್ನೇಹಿತರ ಜೊತೆ ನದಿ ದಡದಲ್ಲಿ ನೀರು ಕುಡಿಯುತ್ತಿರುವಾಗ ಮೊಸಳೆ ದಾಳಿ ನಡೆಸಿ ಮಲ್ಲಿಕಾರ್ಜುನನ್ನು ಎಳೆದುಕೊಂಡು ಹೋಗಿದೆ.

ಇನ್ನು ಪ್ರಾಣಾಪಾಯದಿಂದ ಐವರು ಮಕ್ಕಳು ಪಾರಾಗಿ, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಗ್ರಾಮಸ್ಥರು ಸ್ಥಳೀಯ ಮೀನುಗಾರರ ಎರಡು ತೆಪ್ಪ ಬಳಸಿ ಮಲ್ಲಿಕಾರ್ಜುನ್‌ಗಾಗಿ ಶೋಧಕಾರ್ಯ ನಡೆಸಿದರೂ ಬಾಲಕ ಸುಳಿವು ಪತ್ತೆಯಾಗಿಲ್ಲ. ರಾತ್ರಿಯಾದ ಹಿನ್ನೆಲೆ ಶೋಧ ಕಾರ್ಯಚರಣೆಯನ್ನ ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಯಾಪಲದಿನ್ನಿ ಠಾಣೆ ಪೊಲೀಸರು ಸ್ಥಳಕ್ಕೆ ತಡವಾಗಿ ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಶೋಧಕಾರ್ಯ ನಡೆಸಲಿಲ್ಲ. ನದಿ ದಂಡೆಯಲ್ಲಿ ಮಲ್ಲಿಕಾರ್ಜುನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Edited By : Vijay Kumar
PublicNext

PublicNext

02/12/2020 09:51 pm

Cinque Terre

93.45 K

Cinque Terre

0