ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೊಲೀಸರಿಗೆ ಸವಾಲಾದ 'ಉಗ್ರ ಬರಹ'

ಮಂಗಳೂರು: ನಗರದ ಕದ್ರಿ ಠಾಣಾ ವ್ಯಾಪ್ತಿಯ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಕಾಣಿಸಿಕೊಂಡ 'ಉಗ್ರ ಬರಹ' ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಬೆಳ್ಳಂ ಬೆಳಗ್ಗೆ ಕಾಣಿಸಿಕೊಂಡ ಈ ಗೋಡೆ ಬರಹದಲ್ಲಿ ಸಂಘ ಪರಿವಾರದ ಮುಖಂಡರಿಗೆ ಎಚ್ಚರಿಕೆ ಭಾಷೆಯಲ್ಲಿ ಬರಹಗಳನ್ನ ಬರೆಯಲಾಗಿದೆ. ಸಂಘ ಪರಿವಾರ ನಿಯಂತ್ರಣಕ್ಕೆ ಲಷ್ಕರ್-ಇ-ತೊಯ್ಬಾ ಮತ್ತು ತಾಲಿಬಾನ್ ಸಂಘಟನೆಗಳನ್ನ ಆಹ್ವಾನಿಸುವಂತೆ ಮಾಡಬೇಡಿ ಅನ್ನೋ ಅರ್ಥದಲ್ಲಿ ಬರೆಯಲಾಗಿದೆ. ಜೊತೆಗೆ ಹ್ಯಾಷ್ ಟ್ಯಾಗ್ ಬಳಸಿ 'ಲಷ್ಕರ್ ಜಿಂದಾಬಾದ್' ಎಂದು ಎರಡು ಬಾರಿ ಬರೆಯಲಾಗಿದೆ. ಸದ್ಯ ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಗೋಡೆ ಬರಹವನ್ನ ಪೈಂಟ್ ಬಳಸಿ ಅಳಿಸಿ ಹಾಕಿದ್ದಾರೆ.

ಅಲ್ಲದೇ ಪ್ಲಾಸ್ಟಿಕ್ ಕವರ್ ಗಳನ್ನ ಬಳಸಿ ಮುಚ್ಚಲಾಗಿದೆ.

ಆದರೆ ಬೆಳ್ಳಂ ಬೆಳಗ್ಗೆ ಕಾಣಿಸಿಕೊಂಡ ಈ ರೀತಿಹ ಬರಹ ಸಹಜವಾಗಿಯೇ ಕರಾವಳಿಯಲ್ಲಿ ಆತಂಕಕ್ಕೂ ಕಾರಣವಾಗಿದೆ. ಮೊದಲೇ ಬಲಪಂಥೀಯ ರಾಜಕಾರಣಿಗಳು ಮಂಗಳೂರನ್ನ ಉಗ್ರರ 'ಸ್ಲೀಪರ್ ಸೆಲ್' ಎಂದೇ ವ್ಯಾಖ್ಯಾನಿಸುತ್ತಿದ್ದಾರೆ. ಇದರ ಬೆನ್ನಿಗೆ ಇಂತಹ ಗೋಡೆ ಬರಹ ಕಾಣಿಸಿಕೊಂಡಿದ್ದು ನಗರದಲ್ಲಿ ನಿಜಕ್ಕೂ ಉಗ್ರ ಚಟುವಟಿಕೆ ನಡೆಯುತ್ತಿದೆಯೇ ಅನ್ನೋ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.‌ ಪೊಲೀಸರ ಮಾಹಿತಿ ಪ್ರಕಾರ, ಇದೊಂದು ಕಿಡಿಗೇಡಿಗಳ ಕೃತ್ಯವಾಗಿರುವ ಶಂಕೆ‌ ಇದೆ. ಮುಂಜಾವ 2 ರಿಂದ 4 ಗಂಟೆ ಸಮಯದಲ್ಲಿ ತಂಡವಾಗಿ ಬಂದ ಕಿಡಿಗೇಡಿಗಳು ಈ ಕೃತ್ಯ ನಡೆಸಿರುವ‌ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು ನಗರದಲ್ಲಿರುವ ಪ್ರಮಖ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.‌ ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಎನ್ನುವಂತೆ ಈ ರೀತಿಯ ಬರಹ ಕಾಣಿಸಿಕೊಂಡಿದೆ. ಶೀಘ್ರವೇ ಆರೋಪಿಗಳನ್ನ ಬಂಧಿಸುವ ವಿಶ್ವಾಸವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.

Edited By : Manjunath H D
PublicNext

PublicNext

27/11/2020 11:56 am

Cinque Terre

144.86 K

Cinque Terre

9