ಲಕ್ನೋ: ವಿದ್ಯಾರ್ಥಿನಿಯೊಬ್ಬಳು ಆನ್ಲೈನ್ ಕ್ಲಾಸ್ ವೇಳೆ ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಹಾಗೂ ಪಾರ್ನ್ ವಿಡಿಯೋ ಕುಳುಹಿಸಿದ ಘಟನೆ ಉತ್ತರ ಪ್ರದೇಶದ ಆಜಂಗಡ್ನಲ್ಲಿ ನಡೆದಿದೆ.
ಆಜಂಗಡ್ನಲ್ಲಿರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ ಆನ್ಲೈನ್ ಕ್ಲಾಸ್ ನಡೆಯುತ್ತಿತ್ತು. ಈ ವೇಳೆ 10ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಟೀಚರ್ ವಿರುದ್ಧ ಅಸಭ್ಯ ಭಾಷೆಯನ್ನು ಪ್ರಯೋಗಿಸಿ ಅಶ್ಲೀಲ ಮೆಸೇಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಾರ್ನ್ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಶಿಕ್ಷಕಿ ಪ್ರಾಂಶುಪಾಲರಿಗೆ ಈ ಘಟನೆಯನ್ನು ವಿವರಿಸಿದ್ದು, ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರೂ ವಿದ್ಯಾರ್ಥಿನಿಯರ ಪೋಷಕರನ್ನು ಶಾಲೆಗೇ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಆದರೆ ಅವರು ಕಳೆದ 15 ದಿನಗಳಿಂದ ನಗರದಲ್ಲಿಯೇ ಇಲ್ಲ ಹಾಗೂ ಅವರ ಬಳಿ ಮೊಬೈಲ್ ಕೂಡ ಇಲ್ಲ ಎಂದು ಹೇಳಿದ್ದಾರೆ.
PublicNext
22/11/2020 03:08 pm