ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಯುತ್ತಿದ್ದ ಜೀವ ಉಳಿಸಿದ ಪೊಲೀಸ್ ಅಧಿಕಾರಿಯ ಮಕ್ಕಳು

ದಾವಣಗೆರೆ- ಮಹಿಳೆಯೊಬ್ಬರು ನೇಣು ಹಾಕಿಕೊಂಡದ್ದನ್ನು ಕಂಡ ಬಾಲಕನೊಬ್ಬ ಕೂಡಲೇ ಅಕ್ಕಪಕ್ಕದವರನ್ನು ಕರೆದು ಆಕೆಯ ಪ್ರಾಣ ಉಳಿಸಿದ್ದಾನೆ. ಇಂಹತ ಒಂದು ಕಾಕತಾಳೀಯ ಘಟನೆಗೆ ಕಾರಣವಾದದ್ದು ಬಾಲಕನ ಚಾಕೊಲೇಟ್ ಮೋಹ!

ಹೌದು. ಈ ಘಟನೆಯನ್ನು ಅಚಾನಕ್ ಅಂತೀರಾ ಸಿನಿಮೀಯ ಅಂತೀರಾ ನಿಮಗೆ ಬಿಟ್ಟಿದ್ದು. ಆದ್ರೆ ವಿಷಯ ಮಾತ್ರ ಸತ್ಯ. ಅದು ದಾವಣಗೆರೆ ಹೊರವಲಯದ ಉತ್ತಮ ಚಂದ ಬಡಾವಣೆಯಲ್ಲಿ ನಡೆದಿದ್ದು.

ಪೊಲೀಸ್ ಇಲಾಖೆಯಲ್ಲಿ ಎ ಎಸ್ ಐ ಆಗಿರುವ ವೆಂಕಟೇಶ್ ರೆಡ್ಡಿ-ಲಕ್ಶ್ಮೀ ರೆಡ್ಡಿ ತಮ್ಮ ಮಕ್ಕಳಾದ ಪ್ರಣೀತಾ ಹಾಗೂ ಸುಶಾಂತ್ ಜೊತೆಗೆ ಉತ್ತಮಚಂದ ಬಡಾವಣೆಯಲ್ಲಿ ವಾಸವಿದ್ದಾರೆ. ಮಟಮಟ ಮದ್ಯಾಹ್ನದ ಬಿಸಿಲಿನಲ್ಲಿ ಪುತ್ರ ಸುಶಾಂತ್ ಗೆ ಚಾಕೊಲೇಟ್ ತಿನ್ನುವ ಆಸೆಯಾಗಿದೆ. ಮನೆ ಹತ್ತಿರ ಅಂಗಡಿಗೆ ಚಾಕೊಲೇಟ್ ತರಲೆಂದು ಸುಶಾಂತ್ ಹೋಗಿದ್ದಾನೆ. ಯಾರೂ ಇಲ್ಲದ ಕಾರಣ ನೇರವಾಗಿ ಅಂಗಡಿ ಒಳಗೆ ಸುಶಾಂತ್ ಹೋಗಿದ್ದಾನೆ. ಅಲ್ಲಿ ಅಂಗಡಿಯ ಯಜಮಾನಿಯನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾನೆ. ಗಾಬರಿಯಾದ ಸುಶಾಂತ್ ಕೂಡಲೇ ತನ್ನ ಅಕ್ಕ ಪ್ರಣೀತಾಳನ್ನು ಕರೆದಿದ್ದಾನೆ.

ನಂತರ ಅಕ್ಕಪಕ್ಕದವರಿಗೆ ತಿಳಿಸಲಾಗಿ ಅವರೆಲ್ಲ ಸ್ಥಳಕ್ಕೆ ಧಾವಿಸಿದ್ದಾರೆ‌. ನೇಣು ಬಿಗಿದ ಸ್ಥಿತಿಯಲ್ಲಿದ್ದ ಅಂಗಡಿಯ ಯಜಮಾನಿಯನ್ನು ಕೆಳಗಿಳಿಸಿ ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ರೀತಿಯ ಸಮಯಪ್ರಜ್ಞೆ ತೋರಿದ ಬಾಲಕ ಸುಶಾಂತನಿಗೆ ನೆರೆಹೊರೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾಳೆ. ಆದ್ರೆ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನೆಂದು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Edited By : Nagaraj Tulugeri
PublicNext

PublicNext

18/11/2020 02:17 pm

Cinque Terre

76.54 K

Cinque Terre

8