ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳಿಗೆ ಕಿರುಕುಳ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ದಲಿತ ದಂಪತಿಯನ್ನೇ ಕೊಲೆಗೈದ

ಚೆನ್ನೈ: ಮಗಳಿಗೆ ಕಿರುಕುಳ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ದಲಿತ ದಂಪತಿಯನ್ನೇ ಕೊಲೆಗೈದ ಅಮಾನವೀಯ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ರಾಮಸಾಮಿ (55) ಮತ್ತು ಅರುಕ್ಕಾನಿ (48) ಕೊಲೆಯಾದ ದಲಿತ ದಂಪತಿ. ಕೊಲೆಗೈದ ಆರೋಪಿ ಸೂರಿಯಾನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸೂರಿಯಾ ಅದೇ ಗ್ರಾಮದ ರಾಮಸಾಮಿ ಅವರ 32 ವರ್ಷದ ಮಗಳನ್ನು ಅಸಭ್ಯವಾಗಿ ನಿಂತಿಸಿದ್ದ. ಇದನ್ನು ರಾಮಸಾಮಿ ಪ್ರಶ್ನಿಸಿ ಶಿಕ್ಷಿಸಿದ್ದರು. ಇದರಿಂದ ಕೋಪಗೊಂಡ ಸೂರಿಯಾ, ರಾಮಸಾಮಿ ದಂಪತಿಯನ್ನು ಕೊಲೆಗೈದಿದ್ದಾನೆ.

Edited By : Vijay Kumar
PublicNext

PublicNext

16/11/2020 04:09 pm

Cinque Terre

56.94 K

Cinque Terre

0