ಗದಗ: ಸ್ಕೂಟಿ ಕದಿಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಖದೀಮನನ್ನು ಸಾರ್ವಜನಿಕರೇ ಹಿಡಿದು ಮರಕ್ಕೆ ಕಟ್ಟಿ ಥಳಿಸಿದ್ದಾರೆ.
ಈ ಘಟನೆ ಗದಗ ನಗರದ ಟಾಗೋರ್ ರಸ್ತೆಯಲ್ಲಿ ನಡೆದಿದೆ. ಬೈಕ್ ಕಳ್ಳ ಕುಮಾರ್ ನನ್ನು ಜನ ಪೊಲೀಸರಿಗೆ ಒಪ್ಪಿಸಿದ್ದಾರೆ. ಶರಣು ಪಾಟೀಲ್ ಎಂಬುವವರಿಗೆ ಸೇರಿದ ಬೈಕ್ ಇದಾಗಿದೆ. ನಕಲಿ ಕೀ ಬಳಸಿ ಈತ ಬೈಕ್ ಹಾಗೂ ಪೆಟ್ರೋಲ್ ಕದಿಯುತ್ತಿದ್ದ ಎನ್ನಲಾಗಿದೆ. ಗದಗ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
PublicNext
15/11/2020 12:56 pm