ಮುಂಬೈ: ಕೆಲಸಗಾರರೇ ಮೋಸ ಮಾಡಿದರೆ ನಂಬಿಕೆಗೆ ಬೆಲೆ ಎಲ್ಲಿ ಅಲ್ವೇ ಇಲ್ಲೊಂದು ಘಟನೆಯಲ್ಲಿ ಎಟಿಎಂಗೆ ಹಣ ಅಪ್ ಲೋಡ್ ಮಾಡಲು 4.25 ಕೋಟಿ ರೂ. ಹಣ ತುಂಬಿ ಬಂದಿರುವ ವ್ಯಾನ್ ನೊಂದಿಗೆ ಚಾಲಕ ಪರಾರಿಯಾಗಿರುವ ಘಟನೆ ವಿರಾರ್ ನ ಬೋಲಿಂಜ್ ಪ್ರದೇಶದಲ್ಲಿ ನಡೆದಿದೆ.
ಅಧಿಕಾರಿಗಳು ಬ್ಯಾಂಕ್ ಎಟಿಎಂಗೆ ಹಣ ಅಪ್ ಲೋಡ್ ಮಾಡಲು 4.25 ಕೋಟಿ ನಗದು ತುಂಬಿರುವ ವ್ಯಾನ್ ನೊಂದಿಗೆ ಬಂದಿದ್ದರು.
ಅಧಿಕಾರಿಗಳು ಹಣವನ್ನು ಅಪ್ ಲೋಡ್ ಮಾಡಲು ತಯಾರು ನಡೆಸುತ್ತಿದ್ದಾಗ ವಾಹನ ಚಾಲಕ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಹಣ ತುಂಬುವ ವ್ಯಾನ್ ನೊಂದಿಗೆ ಪರಾರಿಯಾಗಿದ್ದಾನೆ.
ವ್ಯಾನ್ ನಲ್ಲಿ ಸುಮಾರು 4.25 ಕೋಟಿ ರೂ ಹಣ ಇತ್ತು ಎಂದು ಎಟಿಎಂಗೆ ಹಣ ತುಂಬಲು ಬಂದಿರುವ ಅಧಿಕಾರಿಗಳು ಅರ್ನಾಲಾಪೊಲೀಸರಿಗೆ ತಿಳಿಸಿದ್ದಾರೆ.
ಆರೋಪಿ ಚಾಲಕನನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ವಿರಾರ್ ವಿಭಾಗದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರೇಣುಕಾ ಬಾಗ್ಡೆ ತಿಳಿಸಿದ್ದಾರೆ.
PublicNext
13/11/2020 02:30 pm