ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ದಂಧೆ ವರದಿ ಮಾಡಿದ ಪತ್ರಕರ್ತ ಕೊಲೆ

ಚೆನ್ನೈ- ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದ ಸುದ್ದಿ ವಾಹಿನಿ ವರದಿಗಾರನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಇದರಲ್ಲಿ ಆತನ ಸ್ನೇಹಿತರೂ ಆರೋಪಿಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತಮಿಳು ನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಸ್ರೇವೆಲ್ ಮೋಸಸ್ ಎಂಬ 27 ವರ್ಷದ ಯುವ ಪತ್ರಕರ್ತನೇ ಕೊಲೆಯಾದ ದುರ್ದೈವಿ. ಇವರು ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದರು ಹಾಗೂ ಪೊಲೀಸರಿಗೆ ಮಾಹಿತಿ ನೀಡಬಹುದೆಂಬ ಗುಮಾನಿಯಿಂದ ದಂಧೆಕೋರರು ಈ ಕೃತ್ಯ ಎಸಗಿದ್ದಾರೆ. ಆದ್ರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಇಸ್ರೇವೆಲ್ ಮೋಸೆಸ್ ಅವರು ಡ್ರಗ್ಸ್ ದಂಧೆ ಕುರಿತಂತೆ ಯಾವುದೇ ರೀತಿಯ ಸುದ್ದಿ ಬಿತ್ತರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

10/11/2020 10:34 am

Cinque Terre

84.46 K

Cinque Terre

2