ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

30 ಸಾವಿರ ರೂ. ಸಾಲ ತಂದಿಟ್ಟ ಸಾವು; ಲೋನ್​​ ಆ್ಯಪ್​ ಏಜೆಂಟ್​ಗಳು​ ಕೊಟ್ಟ ಕಾಟಕ್ಕೆ ಉಸಿರು ಚೆಲ್ಲಿದ ದಂಪತಿ

ವಿಶಾಖಪಟ್ಟಣ: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಅಮಾಯಕ ಜೀವಗಳು ಬಲಿಯಾಗುತ್ತವೆ.

ತಾಜಾ ಬೆಳವಣಿಗೆ ಒಂದರಲ್ಲಿ ಸಾಲದ ಆ್ಯಪ್​ ಆಪರೇಟರ್​ಗಳ ಕಿರುಕುಳವನ್ನು ಸಹಿಸಲಾರದೇ ಆಂಧ್ರ ಪ್ರದೇಶದ ರಾಜಮುಂಡ್ರಿ ಜಿಲ್ಲೆಯ ದಂಪತಿ ಸಾವಿನ ಹಾದಿ ಹಿಡಿದಿರುವ ಘಟನೆ ಬುಧವಾರ ನಡೆದಿದೆ.

ಮೃತ ದಂಪತಿಯನ್ನು ದುರ್ಗಾ ರಾವ್​ ಮತ್ತು ಆತನ ಪತ್ನಿ ರಮ್ಯಾ ಲಕ್ಷ್ಮೀ ಎಂದು ಗುರುತಿಸಲಾಗಿದೆ. ದಂಪತಿ ಲೋನ್​ ಆ್ಯಪ್​ ಮೂಲಕ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಹಣ ಪಾವತಿಸದಿದ್ದರೆ ರಮ್ಯಾ ಅವರು ನಗ್ನವಾಗಿ ಕಾಣುವಂತೆ ಎಡಿಟ್​ ಮಾಡಿದ ವೀಡಿಯೊಗಳು ಮತ್ತು ಫೋಟೋಗಳನ್ನು ಜಾಲತಾಣದಲ್ಲಿ ಶೇರ್​ ಮಾಡುವುದಾಗಿ ಬೆದರಿಸುವ ಮೂಲಕ ರಿಕವರಿ ಏಜೆಂಟ್‌ಗಳು ನಿರಂತರ ಕಿರುಕುಳ ನೀಡುತ್ತಿದ್ದರು.

ಸುಮಾರು 2,000 ರೂ.ಗಳ ಕೆಲವು ಕಂತುಗಳನ್ನು ಪಾವತಿಸಿದರು ಸಹ ಕಿರುಕುಳ ಹಾಗೇ ಮುಂದುವರಿದಿತ್ತು. ಅಲ್ಲದೆ, ಎಡಿಟ್​ ಮಾಡಿದ ಫೋಟೋ ಮತ್ತು ವಿಡಿಯೋಗಳನ್ನು ಸಂಬಂಧಿಕರು ಮತ್ತು ಪರಿಚಯಸ್ಥರೊಂದಿಗೆ ಹಂಚಿಕೊಂಡಿದ್ದರು. ಇದಕ್ಕೆ ನೊಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ದಂಪತಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ದೇಶಾದ್ಯಂತ ವಿಸ್ತರಿಸಿರುವ ಲೋನ್​ ಆಯಪ್​ಗಳ ಸಾಮಾನ್ಯ ಕಾರ್ಯಾಚರಣೆ ಇದೇ ಆಗಿದೆ. ಕೊರೊನಾ ಸಮಯದಲ್ಲಿ ಇವು ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಈ ಲೋನ್ ಅಪ್ಲಿಕೇಶನ್‌ಗಳು, ಅವುಗಳಲ್ಲಿ ಹೆಚ್ಚಿನವು ಚೈನೀಸ್-ಮಾಲೀಕತ್ವದವು. ಸುಮಾರು 2,000 ರಿಂದ 20,000 ರೂ.ವರೆಗಿನ ಸಾಲಗಳನ್ನು ಬೃಹತ್ ಬಡ್ಡಿ ದರಗಳಲ್ಲಿ ನೀಡುತ್ತವೆ. ಹೆಚ್ಚು ಪರಿಶೀಲನೆಯ ಅಗತ್ಯವಿಲ್ಲದೆ, ಸಾಲ ಸುಲಭವಾಗಿ ಸಿಗುವುದರಿಂದ ಜನರು ಮರಳಾಗುತ್ತಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಸಾಲದ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Edited By : Abhishek Kamoji
PublicNext

PublicNext

11/09/2022 05:51 pm

Cinque Terre

66.17 K

Cinque Terre

5