ಮಧ್ಯಪ್ರದೇಶ: ಮಹಾರಾಷ್ಟ್ರ ಸರ್ಕಾರದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ವೊಂದು ಮಧ್ಯಪ್ರದೇಶದ ಧರ್ ಎಂಬಲ್ಲಿ ನರ್ಮದಾ ನದಿಗೆ ಉರುಳಿ, 13 ಮಂದಿ ಮೃತಪಟ್ಟ ಘಟನೆ ನಡೆದಿದೆ.
ಗುಜರಾತ್ನ ವಿವಿಧೆಡೆ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ನರ್ಮದಾ ನದಿ ಉಕ್ಕಿ ಹರಿಯುತ್ತಿತ್ತು. ಅಪಘಾತಕ್ಕೆ ನಿಖರ ಕಾರಣ ಮತ್ತು ಗಾಯಾಳುಗಳ ಪರಿಸ್ಥಿತಿ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಬಸ್ಸಿನಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ನತದೃಷ್ಟ ಬಸ್‌ನಲ್ಲಿದ್ದವರು ಇಂದೋರ್ನಿಂದ ಪುಣೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
PublicNext
18/07/2022 12:36 pm