ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಥಕ್ಕೆ ವಿದ್ಯುತ್ ತಗುಲಿ ಯುವಕ ಸಾವು:15 ಜನರಿಗೆ ಗಾಯ

ದಾವಣಗೆರೆ: ರಥಕ್ಕೆ ವಿದ್ಯುತ್ ತಂತಿ ತಗುಲಿ ಓರ್ವ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ 15ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಅವಘಡದ ವೇಳೆ 20 ವರ್ಷದ ಅರ್ಜುನ್ ಸಾವನ್ನಪ್ಪಿದ್ದಾನೆ.

ಇಂದು ಬೆಳಿಗ್ಗೆ ದುರ್ಗಮ್ಮ ದೇವಿಯ ರಥ ಎಳೆಯುವಾಗ ಅವಘಡ ನಡೆದಿದ್ದು,ಬೇಸಿಗೆ ಆಗಿದ್ದರಿಂದ ಕೊಂಚ ಕೆಳಗೆ ಕಬ್ಬಿಣದ ತಂತಿಗಳು ಇಳಿದಿದ್ದವು. ಈ ವೇಳೆ ರಥಕ್ಕೆ ವಿದ್ಯುತ್ ತಂತಿ ತಗುಲಿ ತೇರು ಎಳೆಯುತಿದ್ದ ಯುವಕ ಸಾವನ್ನಪ್ಪಿದ್ದರೆ, 15ಕ್ಕೂ ಹೆಚ್ಚು ಗಾಯಾಳುಗಳನ್ನು ಪಕ್ಕದ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಜನರು ದಾಖಲಿಸುವ ಮೂಲಕ‌ ಮಾನವೀಯತೆ ಮೆರೆದರು. ಪ್ರತಿ ವರ್ಷ ಕೆಂಗಾಪುರದಲ್ಲಿ ದುರಗಮ್ಮ ದೇವಿ ಜಾತ್ರೆ ನಡೆಯುತ್ತದೆ. ಈ ವೇಳೆ ತೇರು ಎಳೆಯಲಾಗುತ್ತದೆ.

Edited By : Nagaraj Tulugeri
PublicNext

PublicNext

13/04/2022 03:32 pm

Cinque Terre

44.95 K

Cinque Terre

2