ಚಿಕ್ಕಬಳ್ಳಾಪುರ: ರಸ್ತೆ ಮೇಲೆ ಬಿದ್ದ ಟೊಮೆಟೊಗಳನ್ನು ಆರಿಸಿಕೊಳ್ಳಲು ಮುಂದಾದ ಮಹಿಳೆಯ ಮೇಲೆ ಮಿನಿ ಕಂಟೇನರ್ ವಾಹನ ಹರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾವಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.
ನಗರದ ಜೆ.ಜೆ ಕಾಲೋನಿಯ ನಿವಾಸಿ ಗಂಗಮ್ಮ (55) ಮೃತ ದುರ್ದೈವಿ. ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಳಗೆ ಬಿದ್ದಿರುವ ಟೊಮೆಟೊವನ್ನು ಮಹಿಳೆ ಗಂಗಮ್ಮ ಆರಿಸಿಕೊಳ್ಳುವಾಗ ಈ ದುರ್ಘಟನೆ ನಡೆದಿದೆ. ಚಾಲಕ ತನ್ನ ವಾಹನ ಲೋಡ್ ಮಾಡಲು ಮುಂದೆ ಬಂದಾಗ ವಾಹನದ ಕೆಳಗೆ ಟೊಮೊಟೊ ಆರಿಸಿಕೊಳ್ಳುತ್ತಿದ್ದ ಮಹಿಳೆಯ ಮೇಲೆ ಮುಂದಿನ ಚಕ್ರ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇಂತಹ ದುರ್ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸುವಂತೆ ರೈತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಸಾರ್ವಜನಿಕರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
11/12/2021 07:07 pm