ತುಮಕೂರು: ಜಲಾಶಯದ ನೀರಿನಲ್ಲಿ ಯುವಕ ಹಾಗೂ ಯುವತಿ ಕೊಚ್ಚಿ ಹೋದ ಘಟನೆ ಕುಣೀಗಲ್ ಮಾರ್ಕೋನಹಳ್ಳಿ ಜಲಾಶಯದ ಬಳಿ ನಡೆದಿದೆ. ಫರ್ವೆಜಾ (20) ಮತ್ತು ಸಾದಿಕ್ (21) ಎಂಬಾತರೇ ನೀರಿನಲ್ಲಿ ಕೊಚ್ಚಿ ಹೋದವರು.
ಜಲಾಶಯದಿಂದ ಏಕಾಏಕಿ ಶಿಂಷಾ ನದಿಗೆ ನೀರು ಹರಿದು ಬಂದಿದೆ. ನದಿಯಲ್ಲಿ ಮೋಜು ಮಾಡಲು ಯುವಕ ಯುವತಿ ಇಳಿದಿದ್ದರು ಎನ್ನಲಾಗಿದೆ. ಇವರು ಕುಣಿಗಲ್ ಪಟ್ಟಣದವರು ಎಂಬ ಮಾಹಿತಿ ಇದೆ. ಸ್ಥಳಕ್ಕೆ ಅಮೃತ್ತೂರು ಪೊಲೀಸರು ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ನಾಪತ್ತೆಯಾದ ಯುವಕ ಯುವತಿಗಾಗಿ ಶೋಧ ನಡೆಸಿದ್ದಾರೆ.
PublicNext
28/11/2021 08:11 pm