ಬಿಹಾರ: ದೀಪಾವಳಿಯ ಸಂಭ್ರಮದಲ್ಲಿ ಬಿಹಾರದಲ್ಲಿ ದುರಂತವೊಂದು ನಡೆದಿದೆ. ಕಳೆದೆರಡು ದಿನಗಳಿಂದ ಬಿಹಾರದಲ್ಲಿ ಸುಮಾರು 21 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಇವರ ಸಾವಿಗೆ ನಕಲಿ ಸಾರಾಯಿ ಕಾರಣ ಎನ್ನುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಗೋಪಾಲ್ ಗಂಜ್ ನಲ್ಲಿ ಮದ್ಯಪಾನ ಮಾಡಿದ ಜನ, ಮೋತಿಹಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರೆಲ್ಲರೂ ಮಹ್ಮದ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಹರ್, ಮಹಮೂದ್ ಪುರ, ಮಂಗೋಲ್ ಪುರ, ಬುಚೆಯಾ ನಿವಾಸಿಗಳಾಗಿದ್ದಾರೆ.
ಉಳಿದವರು ಛಪ್ರಾದ ಮಸ್ರಖ್ ಪೊಲೀಸ್ ಠಾಣೆಯ ರಸೌಲಿ ಗ್ರಾಮದ ನಿವಾಸಿಗಳು. ಸ್ಥಳೀಯರ ಹೇಳಿಕೆ ಪ್ರಕಾರ, ಮಂಗಳವಾರ ಎಲ್ಲರೂ ಮದ್ಯ ಸೇವಿಸಿದ್ದರು ಎಂದಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.
PublicNext
04/11/2021 04:11 pm