ಹೈದರಾಬಾದ್: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹೈದರಾಬಾದ್ ಸೈಬರ್ ಕ್ರೈಂ ವಿಭಾಗದ ಎಸಿಪಿ ಕೆವಿಎಂ ಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪತ್ನಿ ಸೇರಿ ಮೂವರು ಮೃತಪಟ್ಟಿದ್ದಾರೆ.
ಕೆವಿಎಂ ಪ್ರಸಾದ್ ಅವರ ಪತ್ನಿ ಕೆ.ಶಂಕರಮ್ಮ (48), ಪ್ರಸಾದ್ ಅವರ ತಂಗಿ ರೇಣುಕಾ (42) ಮತ್ತು ಇವರ ಪತಿ ಕೆ.ಬಾಲಕೃಷ್ಣ (48) ಮೃತ ದುರ್ದೈವಿಗಳು. ಎಸಿಪಿ ಕೆವಿಎಂ ಪ್ರಸಾದ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಎಸಿಪಿ ಕೆವಿಎಂ ಪ್ರಸಾದ್ ಅವರು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಪ್ರಕಾಶಂ ಜಿಲ್ಲೆಯ ಚಿರಾಲಕ್ಕೆ ಹೋಗಿ ಕಾರಿನಲ್ಲಿ ವಾಪಸ್ ಆಗುತ್ತಿದ್ದರು. ಮಾರ್ಗ ಮಧ್ಯೆ ಕೀಸರ ತಾಲೂಕಿನ ಯಾದ್ಗಾರಪಲ್ಲಿಯ ಔಟರ್ ರಿಂಗ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
PublicNext
25/10/2021 05:06 pm