ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಫುಡ್ ಫ್ಯಾಕ್ಟರಿ ಸ್ಪೋಟ: ಮೃತಪಟ್ಟ ಇಬ್ಬರೂ ಬಿಹಾರ ಮೂಲದವರು

ಬೆಂಗಳೂರು: ನಗರದ ಮಾಗಡಿ ರಸ್ತೆಯ ಎಮ್.ಎಮ್ ಫುಡ್ ಫ್ಯಾಕ್ಟರಿ ಬಳಿ ನಡೆದ ಬಾಯ್ಲರ್ ಸ್ಫೋಟಕ ಪ್ರಕರಣದಲ್ಲಿ ಮೃತಪಟ್ಟ ಇಬ್ಬರೂ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.

ಸಚಿನ್ ಹಾಗೂ ವಿಜಯ್ ಮೆಹ್ತಾ ಮಾಲೀಕತ್ವದ ಫುಡ್ ಫ್ಯಾಕ್ಟರಿ ಇದಾಗಿದೆ. ಘಟನೆಯಲ್ಲಿ ಸಚಿನ್ ಕೂಡ ಗಾಯಗೊಂಡಿದ್ದಾರೆ. ಮನೀಷ್ ಹಾಗೂ ಸೌರವ್ ಎಂಬ ಕೇವಲ 21 ವರ್ಷ ವಯಸ್ಸಿನ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಇನ್ನು ಶಾಂತಿ, ಸಚಿನ್, ಧನಲಕ್ಷ್ಮೀ ಎಂಬ ಮೂವರಿಗೆ ಗಂಭೀರವಾಗಿ ಗಾಯಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಸಂಜೀವ್ ಪಾಟೀಲ್, ಗಾಯಗೊಂಡವರ ಹೇಳಿಕೆ ಪಡೆದು ದೂರು ದಾಖಲಿಸಲಾಗಿದೆ. ಜನವಸತಿ ಪ್ರದೇಶದಲ್ಲಿ ಫುಡ್ ಫ್ಯಾಕ್ಟರಿ ನಡೆಸಲು ಅನುಮತಿ ಕೊಟ್ಟ ಸಂಬಂಧಿಸಿದ ಇಲಾಖೆಯವರೇ ಇದಕ್ಕೆ ಜವಾಬ್ದಾರರು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

23/08/2021 04:32 pm

Cinque Terre

181.81 K

Cinque Terre

0