ರಾಮನಗರ : ಕಾರಿನಲ್ಲಿ ಸಿಡಿ ಮದ್ದು ಸಿಡಿದು ಓರ್ವ ವ್ಯಕ್ತಿ ಸಜೀವವಾಗಿ ಸುಟ್ಟಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ವರದಿಯಾಗಿದೆ. ಕನಕಪುರ ತಾಲೂಕು ಮರಳೆಗವಿ ಮಠದ ಸಮೀಪ ಸೋಮವಾರ ಈ ಘಟನೆ ಸಂಭವಿಸಿದೆ. ಸಿಡಿ ಮದ್ದು ಸಿಡಿದ ರಭಸಕ್ಕೆ ಕಾರು ಹಾಗೂ ಕಾರಿನಲ್ಲಿದ್ದ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರ ಛಿದ್ರಗೊಂಡಿದೆ. ಮೃತ ವ್ಯಕ್ತಿಯನ್ನು ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದ ಮಹೇಶ್ ಎಂದು ಗುರುತಿಸಲಾಗಿದೆ.
ಕನಕಪುರದಲ್ಲಿ ಗ್ರಾನೈಟ್ ಕಲ್ಲುಗಣಿಗಾರಿಕೆ ಎತ್ತೇಚ್ಚವಾಗಿ ನಡೆಯುತ್ತಿದೆ. ಶಕ್ತಿ ಮೈನಿಂಗ್ಸ್ ಎಂಬ ಕಲ್ಲು ಗಣಿಗಾರಿಕೆಗೆ ಸೇರಿದ್ದ ಸಿಡಿ ಮದ್ದುಗಳನ್ನು ಮಹೇಶ್, ಸ್ವ್ಟಿ ಕಾರಿನಲ್ಲಿ ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
PublicNext
16/08/2021 08:35 pm