ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಕೋಲಾ: ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ; ಒಬ್ಬ ಸಾವು, 11 ಮಂದಿಗೆ ಗಾಯ

ಅಂಕೋಲಾ: ಹೆದ್ದಾರಿ 63ರ ಅಂಚಿನಲ್ಲಿ ದುರಸ್ತಿಗಾಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಸುಕಿನ ವೇಳೆ ಮಾಸ್ತಿಕಟ್ಟೆ ಸಮೀಪ ನಡೆದಿದೆ.

ಲಾರಿಯ ಮುಂದಿನ ಟಯರ್ ಬ್ಲಾಸ್ಟ್ ಆಗಿ ದುರಸ್ತಿ ಮಾಡುತ್ತಿರುವ ವೇಳೆ ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಓರ್ವ ಅಪರಿಚಿತ ಪ್ರಯಾಣಿಕ ಸ್ಥಳದಲ್ಲಿ ಸಾವನ್ನಪ್ಪಿದ್ದು, 11ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತ ಪ್ರಯಾಣಿಕನ ವಿಳಾಸ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ವಿಷಯ ತಿಳಿದ ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್‌ಐ ಈ.ಸಿ.ಸಂಪತ್, ಎಎಸ್‌ಐ ಅಶೋಕ ತಳಗಪ್ಪನವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಸ್ ಚಾಲಕ ಬೆಂಗಳೂರು ಗೊಟ್ಟಿಗೇರಿಯ ಶಿವಾಜಿ ಶ್ಯಾಮರಾವ್ ಖಾನಪುರೆ ವಿರುದ್ಧ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
PublicNext

PublicNext

06/12/2020 08:03 am

Cinque Terre

74.33 K

Cinque Terre

0