ರಾಜಸ್ಥಾನ್: ಅತೀ ವೇಗವಾಗಿ ಚಲಿಸುತ್ತಿದ್ದ ಬಸ್‌ವೊಂದು 80 ಅಡಿ ಉದ್ದದ ಕಬ್ಬಿಣದ ಪೈಪ್‌ಗೆ ಡಿಕ್ಕಿ ಹೊಡೆದು ಮಹಿಳೆ ಹಾಗೂ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.
ಸುಮೇರಪುರ ಸಾಂಡೇರಾವ್ ಬಳಿಯ ರಾಷ್ಟ್ರೀಯ ಹೆದ್ದಾರಿ 162ರಲ್ಲಿ ಮಂಗಳವಾರ ಸಂಜೆ ದುರ್ಘಟನೆ ನಡೆದಿದ್ದು, 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರುಂಡ ತುಂಡಾದ ಮಹಿಳೆಯನ್ನು ನೈನಾ ದೇವಿ ಎಂದು ಗುರುತಿಸಲಾಗಿದೆ. ನೈನಾ ದೇವಿ ಎತ್ತಿಕೊಂಡಿದ್ದ ಅವರ ನಾಲ್ಕು ತಿಂಗಳ ಮಗುವಿಗೆ ಯಾವುದೇ ಹಾನಿಯಾಗಿಲ್ಲ. ಮೃತ ಯುವಕನನ್ನು ಭಂವರ್ ಲಾಲ್ ಪ್ರಜಾಪತ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಕಬ್ಬಿಣದ ಪೈಪ್ ಮಹಿಳೆಯ ಕುತ್ತಿಗೆಯನ್ನು ಸೀಳಿ ಹೊರಬಂದಿತ್ತು. ಯುವಕನ ತಲೆ ಸೀಳಿ ಹೋಗಿದ್ದು, ಇತರ 13 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೂವರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿಸಿದೆ.
PublicNext
02/12/2020 06:43 pm