ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿತ್ಯ ಹಿಂಸಿಸುವ ಪತಿ,ಅತ್ತೆ,ಮಾವನನ್ನು ಬರ್ಬರವಾಗಿ ಹತ್ಯೆಗೈದ ಸೊಸೆ

ಮಂಡ್ಯ : ಸಮಾಜ ಎಷ್ಟೇ ಮುಂದುವರೆದಿದ್ದರು ಇನ್ನೂ ಹಲವೆಡೆ ಕೆಲವು ಹಿಂಸಾತ್ಮಕ ಕೃತ್ಯಗಳು ನಡೆಯುತ್ತಲೆ ಇವೆ.

ಹೀಗೆ ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ಹತ್ಯೆಗೀಡಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿದೆ.

ನಿರಂತರ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು, ಮಲಗಿದ್ದ ಪತಿ, ಅತ್ತೆ ಮತ್ತು ಮಾವನ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾಳೆ.

ಕೆ.ಆರ್. ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ ವಾರದ ಹಿಂದೆ ಘಟನೆ ನಡೆದಿದ್ದು, ನಿನ್ನೆ ಗಾಯಾಳುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹೆಮ್ಮಡಹಳ್ಳಿಯ ನಿವಾಸಿ, ಮಹಿಳೆಯ ಪತಿ ನಾಗರಾಜು (50), ಮಾವ ವೆಂಕಟೇಗೌಡ(70) ಹಾಗೂ ಅತ್ತೆ ಕುಳ್ಳಮ್ಮ (60) ಕೊಲೆಯಾದವರು.

ಆರೋಪಿ ಮಹಿಳೆ ನಾಗಮಣಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

Edited By : Nirmala Aralikatti
PublicNext

PublicNext

01/11/2020 03:47 pm

Cinque Terre

75.03 K

Cinque Terre

2