ಶ್ರೀನಗರ : ಜಮ್ಮು ಕಾಶ್ಮಿರದ ಕಾಜಿಗುಂಡ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡರ ಮೇಲೆ ಭಯೋತ್ಪಾದಕರು ಗುರುವಾರ ಗುಂಡಿನ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಫಿದಾ ಹುಸೇನ್ ಯಾಟೂ ಉಮರ್ ರಂಜಾನ್ ಮತ್ತು ಉಮರ್ ರಶೀದ್ ಸಾವನ್ನಪ್ಪಿದ್ದಾರೆ ಎಂದು ಕುಲ್ಗಾಮ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.
ನಿನ್ನೆ ರಾತ್ರಿ 8.30 ಸಮಯ ಉಗ್ರರು ಗುಂಡಿನ ಆಕ್ರಮಣ ನಡೆಸಿದಾಗ ಸಂತ್ರಸ್ತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ತಿಳಿದಿದೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗದ ನಡುವೆ ಸಾವನ್ನಪ್ನಿರುವುದಾಗಿ ವೈದ್ಯರಿಂದ ತಿಳಿದಿದ್ದು ದಾಳಿಕೋರರು ಆಲ್ಟೊ ಕಾರ ಹತ್ತಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ಖಂಡಿಸಿದ ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು ನಮ್ಮ ಯುವ ಕಾರ್ಯಕರ್ತರ ಹತ್ಯೆಯನ್ನು ಖಂಡಿಸುತ್ತೇನೆ. ಯುವಕರು ಜಮ್ಮು ಕಾಶ್ಮೀರದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದ್ದರು ಈ ದು:ಖದ ಸಮಯದಲ್ಲಿ ಮೃತರ ಕುಟುಂಬದ ಜೊತೆ ಇರುವುದಾಗಿ ಹೇಳಿದ್ದು ಯುವಕರ ಆತ್ಮಕ್ಕೆ ಶಾಂತಿ ಸಿಗಲೆಂದಿದ್ದಾರೆ ಕಪ್ಪು ಬಿಳುಪಿನ ಕಮಲದ ಪಟವೊಂದನ್ನು ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
PublicNext
30/10/2020 10:41 am