ಮಂಡ್ಯ: ಸಕ್ಕರೆ ನಾಡಿನಲ್ಲಿ 'ಪೋರ್ನ್ ಚಿತ್ರ' ಶೂಟಿಂಗ್ ನಡೆಸುತ್ತಿರುವ ಆಘಾತಕಾರಿ ವಿಚಾರವೊಂದು ಹೊರ ಬಿದ್ದಿದೆ.
ಮಂಡ್ಯದಲ್ಲಿ ಬಡ್ಡಿಕೋರರ ಬೆನ್ನು ಬಿದ್ದ ಪೊಲೀಸರಿಗೆ ಸೆಕ್ಸ್ ದಂಧೆಯು ನಡೆಯುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ. ಗೋಲ್ಡ್ ದೋಖಾ ಆರೋಪಿ ಸೋಮುನನ್ನು ಬಂಧಿಸಲು ಹೋದ ಪೊಲೀಸರು, ಆತನ ಮೊಬೈಲ್ ಪರಶೀಲಿಸಿದಾಗ ಪೋರ್ನ್ ಚಿತ್ರದ ರಹಸ್ಯ ಬಯಲಾಗಿದೆ.
ಸೋಮು ಓರ್ವ ಮಹಿಳೆಯ ಜೊತೆ ಅಸಭ್ಯವಾಗಿ ಮಾತನಾಡಿರುವ, ಏಕಾಂತದಲ್ಲಿರುವ ಆಡಿಯೋ ಇದಾಗಿದ್ದು, ಸೆಕ್ಸ್ ದಂಧೆಯ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ.
'ಮೈಸೂರಿನ ಫಾರ್ಮ್‌ಹೌಸ್‌ವೊಂದರಲ್ಲಿ ಹೆಣ್ಣು ಮಕ್ಕಳ ಫೋಟೋಶೂಟ್ ನಡೆಯುತ್ತದೆ. ಮಧ್ಯವರ್ತಿ, ಕ್ಯಾಮರಾಮೆನ್ ಹಾಗೂ ಹಣ ಕೊಡವ ವ್ಯಕ್ತಿ ಮಾತ್ರ ಫೋಟೋ ಶೂಟಿಂಗ್ ಜಾಗದಲ್ಲಿ ಇರುತ್ತಾರೆ. ಈ ಮೂವರನ್ನು ಬಿಟ್ಟರೆ ಯಾರೂ ಇರಲ್ಲ. ಅದಕ್ಕಾಗಿಯೇ ಫಾರ್ಮ್‌ಹೌಸ್ ಮಾಡಿದ್ದಾರಂತೆ. ಕೊರೊನಾ ಮುಗಿದ ಬಳಿಕ ಅಂದ್ರೆ 10 ತಾರೀಖಿಗೆ ಫೋಟೋ ಶೂಟಿಂಗ್ ನಡೆಯುತ್ತದೆ. ಅದನ್ನು ವಿದೇಶಗಳಲ್ಲಿ ಮಾರಾಟ ಮಾಡಿ 2- 3 ಲಕ್ಷ ರೂ ಗಳಿಸಬಹುದು' ಎಂದು ಮಹಿಳೆ ಆರೋಪಿ ಸೋಮುಗೆ ಹೇಳಿರುವುದು ಆಡಿಯೋದಲ್ಲಿದೆ.
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಪೋರ್ನ್ ಚಿತ್ರ ಶೂಟಿಂಗ್ ಜಾಲದ ಹೆಡೆಮುರಿ ಕಟ್ಟಲು ಮುಂದಾಗಿದೆ.
PublicNext
29/10/2020 06:32 pm