ಇಸ್ಲಾಮಾಬಾದ್- ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಬಂಧಿಸಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೆ ಇದಕ್ಕೆ ನೈಜ ಕಾರಣ ಈಗ ಹೊರಬಿದ್ದಿದೆ.
ಒಂದು ವೇಳೆ ನಾವು ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ರೆ ಭಾರತ ನಮಗೆ ತಕ್ಕ ಉತ್ತರ ಕೊಡುತ್ತಿತ್ತು ಎಂದು ಪಾಕಿಸ್ತಾನ ಮಿಲಿಟರಿ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾ ಅವರು ನನಗೆ ಹೇಳಿದ್ದರು. ಈ ವೇಳೆ ಕಾಲುಗಳು ನಡುಗುತ್ತಿದ್ದವು. ಹೀಗೆಂದು ಸ್ವತಃ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿ ಅಂದು ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು.
ಅಭಿನಂದನ್ ಅವರನ್ನು ಬಂಧಿಸಿದ ವೇಳೆ ನಡೆದ ಸಂಸದೀಯ ಸಭೆಯಲ್ಲಿ ಷಾ ಮೊಹಮ್ಮದ್ ಖುರೇಷಿ ಈ ವಿಷಯ ಹೇಳಿದ್ದರು ಎನ್ನಲಾಗಿದೆ. ಈಗ ಅದೇ ವಿಡಿಯೋವನ್ನು ನಿವೃತ್ತ ಮೇಜರ್ ಗೌರವ್ ಆರ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂದು ನಡೆದ ಸಂಸದೀಯ ಸಭೆಯಲ್ಲಿ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಬಾಜ್ವಾ, ವಿದೇಶಾಂಗ ಸಚಿವ ಖುರೇಷಿ, ಸಂಸದ ಅಯಾಜ್ ಸಾಧಿಕ್ ಹಾಗೂ ಇನ್ನಿತರ ಸಂಸದೀಯ ನಾಯಕರು ಪಾಲ್ಗೊಂಡಿದ್ದರು.
PublicNext
29/10/2020 12:27 pm