ಚಂಡೀಗಢ-ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳು ಹೆಚ್ಚಾಗುತ್ತಲೇ ಇವೆ. ಚಂಡೀಗಢದಲ್ಲಿ ನಿನ್ನೆ ನಡೆದ ಅಪರಾಧ ಮತ್ತೊಂದು ಜ್ವಲಂತ ನಿದರ್ಶನವಾಗಿದೆ.
ನಿಖಿತಾ ತೋಮರ್ ಎಂಬ 21 ವರ್ಷದ ಯುವತಿ ಗುಂಡಿಗೆ ಬಲಿಯಾಗಿದ್ದಾಳೆ. ಪರೀಕ್ಷೆ ಮುಗಿಸಿ ಹೊರಬರುತ್ತಿದ್ದ ಆಕೆಯನ್ನ ದುಷ್ಕರ್ಮಿಯೊಬ್ಬ ಕಾರಿನಲ್ಲಿ ಅಪಹರಿಸಲು ಯತ್ನಿಸಿದ್ದಾನೆ. ಆಗ ಯುವತಿ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಎಂಬುದು ಸದ್ಯದ ತನಿಖೆಯಿಂದ ಗೊತ್ತಾಗಿರುವ ಮಾಹಿತಿ.
ಆದ್ರೆ ಇದಕ್ಕೆ ಲವ್ ಜಿಹಾದ್ ಕಾರಣ ಅಂತ ಹತಳಾದ ನಿಖಿತಾಳ ಸಹೋದರ ಆರೋಪಿಸಿದ್ದಾನೆ. ಶೂಟೌಟ್ ಮಾಡಿದ ಆರೋಪಿ ತೌಸೀಫ್ ಹಾಗೂ ನಿಖಿತಾ ತೋಮರ್ ಅವರ ನಡುವೆ ಕಳೆದ 2 ವರ್ಷಗಳಿಂದ ಸ್ನೇಹವಿತ್ತು. ಈ ನಡುವೆ ಆರೋಪಿ ತೌಸಿಫ್ ಇಸ್ಲಾಮ್ ಧರ್ಮಕ್ಕೆ ಮತಾಂತರ ಆಗುವಂತೆ ಆಗಾಗ ನಿಖಿತಾ ಅವರನ್ನು ಪೀಡಿಸುತ್ತಿದ್ದ. ಅನೇಕ ಬಾರಿ ಒತ್ತಡ ಹೇರಿದ್ದ. ಇದಕ್ಕೆ ನಿಖಿತಾ ಒಪ್ಪದ ಕಾರಣ ತೌಸಿಫ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಫರೀದಾಬಾದ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎಫ್ ಐ ಆರ್ ನಲ್ಲಿ ಲವ್ ಜಿಹಾದ್ ಬಗ್ಗೆ ಪ್ರಸ್ತಾಪವಾಗಿಲ್ಲ. ಹೀಗಾಗಿ ಕೊಲೆಗೆ ಕಾರಣ ಲವ್ ಜಿಹಾದೋ ಅಥವಾ ಸ್ನೇಹ ಸಂಬಂಧ ಮುರಿದುಬಿದ್ದದ್ದಕ್ಕೋ ಎಂಬುದು ಸಂಪೂರ್ಣ ತನಿಖೆ ನಂತರ ತಿಳಿಯುತ್ತೆ ಎನ್ನುತ್ತಿದ್ದಾರೆ ಫರೀದಾಬಾದ್ ಪೊಲೀಸರು.
ಕೊಲೆಯಾಗುವ ಮುನ್ನ ಆರೋಪಿ ತೌಸಿಫ್, ನಿಖಿತಾ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತಿಸಿದ್ದ ಈ ಬಗ್ಗೆ ನಿಖಿತಾ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನಿಂದ ತೌಸಿಫ್ ನ ವೈದ್ಯಕೀಯ ಶಿಕ್ಷಣ ಮೊಟಕುಗೊಂಡಿತ್ತು. ಈ ಕಾರಣಕ್ಕೂ ಕೊಲೆ ನಡೆದಿರಬಹುದಾ ? ಎಂಬ ಊಹಾಪೋಹಗಳು ಹರಿದಾಡುತ್ತಿವೆ
PublicNext
28/10/2020 11:57 am