ಬೀಜಿಂಗ್: ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಬತ್ತು ಜನರು ಸಾವನ್ನಪ್ಪಿರುವ ದಾರುಣ ಘಟನೆ ಈಶಾನ್ಯ ಚೀನಾದ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದ ಜಿಕ್ಸಿ ನಗರದಲ್ಲಿ ನಡೆದಿದೆ.
ನೂಡಲ್ಸ್ ಅನ್ನು ಕಳೆದ ಒಂದು ವರ್ಷದಿಂದ ಫ್ರೀಜರ್‌ನಲ್ಲಿ ಇಡಲಾಗಿತ್ತು. ಇದನ್ನು ಅರಿಯದೆ ಕುಟುಂಬದ ಒಂಬತ್ತು ಮಂದಿ ಸೇವಿಸಿದರೆ, ಉಳಿದ ಮೂವರು ತಿನ್ನಲು ನಿರಾಕರಿಸಿದ್ದರು. ಬಳಿಕ ನೂಡಲ್ಸ್ನಲ್ಲಿದ್ದ ಬೊಂಗ್ರೆಕಿಕ್ ವಿಷಕಾರಿ ಆಮ್ಲದ ಪರಿಣಾಮ ನೂಡಲ್ಸ್ ಸೇವಿಸಿದ್ದ ಇಬ್ಬರು ಮಕ್ಕಳು ಸೇರಿದಂತೆ ಎಲ್ಲ 9 ಜನರು ಮೃತಪಟ್ಟಿದ್ದಾರೆ.
ಈ ನೂಡಲ್ಸ್ ಕಳಿತ ಜೋಳದ ಹಿಟ್ಟಿನಿಂದ ತಯಾರಿಸಲಾಗಿತ್ತು. ಇದು ಚೀನಾದ ಸ್ಥಳೀಯ ಅಡುಗೆಯಾಗಿದೆ. ಇದನ್ನು ಸೌನ್ ಟಂಗ್ಜಿ ಅಂತ ಕರೆಯಲಾಗುತ್ತದೆ.
PublicNext
22/10/2020 06:59 pm