ನವದೆಹಲಿ: ಮನೆಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದಿದ್ದ ವ್ಯಕ್ತಿಯೊಬ್ಬ ಅಶ್ಲೀಲ ವಿಡಿಯೋ ಜೊತೆಗೆ ಬಾಲಕಿಗೆ ಮರ್ಮಾಂಗ ತೋರಿಸಿರುವ ಘಟನೆ ದೆಹಲಿಯ ಮಾಳವೀಯಾ ನಗರದಲ್ಲಿ ನಡೆದಿದೆ.
ಬಾಲಕಿ ತಾಯಿ ನೀಡಿದ ದೂರಿನ ಹಿನ್ನೆಲೆ ಪೊಲೀಸರು 32 ವರ್ಷದ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿಯು ಶನಿವಾರ ಮಾಳವೀಯಾ ನಗರದಲ್ಲಿರುವ ಮನೆಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದಿದ್ದ. ಈ ವೇಳೆ ಬಾಗಿಲ ಬಳಿಯೇ ಕುಳಿತಿದ್ದ ಬಾಲಕಿಗೆ ಮೊದಲು ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ ತೋರಿಸಿದ್ದಾನೆ. ನಂತರ ತನ್ನ ಪ್ಯಾಂಟ್ ಬಿಚ್ಚಿ ಮರ್ಮಾಂಗ ತೋರಿಸುವ ವೇಳೆ ಹೊರಗೆ ಬಾಲಕಿ ತಾಯಿ ಬಂದಿದ್ದಾರೆ. ಬಾಲಕಿ ತಾಯಿ ಬರುತ್ತಿದ್ದಂತೆ ಕಾಮುಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
PublicNext
12/10/2020 06:26 pm