ಮೈಸೂರು: ಇತ್ತಿಚ್ಚಿನ ದಿನಗಳಲ್ಲಿ ನಟನೆ ಮಾಡಲು ಹಲವು ಸ್ವ ಇಚ್ಚೆಯಿಂದ ಮುಂದೆ ಬರುತ್ತಿದ್ದಾರೆ.
ಅದರಲ್ಲೂ ಮಹಿಳೆಯರು ತುಸು ಜಾಸ್ತಿಯೆ ಒಲವು ತೋರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕನೊಬ್ಬ ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ.
ಹೌದು ಗಿರೀಶ್ ಅಲಿಯಾಸ್ ಸಿನಿಮಾ ಗಿರೀಶ್ ಎಂಬ ವ್ಯಕ್ತಿ. ಈತ ಮೈಸೂರಿನ ಗುರುಕಾರ್ ರೇವಣ್ಣ ರಸ್ತೆಯ ನಿವಾಸಿ.
ಇವನು ಮಹಿಳೆಯರಿಗೆ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿದ್ದಾನೆ.
ಮಹಿಳೆಯರಿಂದ ಹಣ ಪಡೆಯುವುದನ್ನು ತಾನೇ ಸ್ವತಃ ವಿಡಿಯೋ ಮಾಡುವ ಮೂಲಕ ಮಹಿಳೆಯನ್ನು ನಂಬಿಸುತ್ತಿದ್ದನು.
ವಂಚನೆ ಮಾತ್ರವಲ್ಲದೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದಾನೆ.
ಕೆಲವರಿಗೆ ತಾನು ಪೊಲೀಸ್ ಎಂದು ಕೂಡ ಸುಳ್ಳು ಹೇಳಿದ್ದಾನೆ. ಹೀಗೆ ಸುಳ್ಳು ಹೇಳಿ ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮೋಸ ಮಾಡಿದ್ದಾನೆ.
ಇದೀಗ ವಂಚನೆಗೆ ಒಳಗಾದ ಮಹಿಳೆಯರು ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿ ಗಿರೀಶ್ ತಲೆ ಮರೆಸಿಕೊಂಡಿದ್ದಾನೆ.
PublicNext
09/10/2020 05:52 pm