ಮುಂಬೈ: 'ಬಿಗ್ ಬಾಸ್ ಹಿಂದಿ' 16ನೇ ಸೀಸನ್ ಪ್ರೇಕ್ಷಕರ ಮನ ಗೆದ್ದಿದ್ದು, ಜನಪ್ರಿಯವಾಗುತ್ತಿದೆ. ಆದರೆ 'ಬಿಗ್ ಬಾಸ್' ಮನೆಯಲ್ಲಿ ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ ಅವರನ್ನು ನೋಡಿ ಪ್ರೇಕ್ಷಕರು ಅತೃಪ್ತರಾಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಸಾಜಿದ್ ಖಾನ್ ಅವರನ್ನು ನೋಡಿದ ಅನೇಕ ಸೆಲೆಬ್ರಿಟಿಗಳು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರು, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದು ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್‌ನಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
ಈ ಮಧ್ಯೆ ಮೀಟೂ (MeToo) ಆರೋಪ ಎದುರಿಸಿ ಸುದ್ದಿಯಾಗಿದ್ದ ಸಾಜಿದ್ ಖಾನ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಟಿ ಶೆರ್ಲಿನ್, ಸಾಜಿದ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
"ಸಾಜಿದ್ ಖಾನ್ ನನಗೆ ತನ್ನ ಗುಪ್ತಾಂಗವನ್ನು ತೋರಿಸಿದ್ದ. ಅಷ್ಟೇ ಅಲ್ಲದೆ ಇದಕ್ಕೆ 0 ಮತ್ತು 10ರ ನಡುವೆ ಯಾವುದೇ ರೇಟ್ ಬೇಕಾದ್ರೂ ಫಿಕ್ಸ್ ಮಾಡು ಎಂದಿದ್ದ. ಈಗ ನಾನು 'ಬಿಗ್ ಬಾಸ್' ಮನೆಗೆ ಹೋಗಿ ಅವನ ರೇಟ್ ಫಿಕ್ಸ್ ಮಾಡಲು ಬಯಸುತ್ತೇನೆ. ತನಗೆ ಕಿರುಕುಳ ನೀಡಿದ ವ್ಯಕ್ತಿಯೊಂದಿಗೆ ಸಂತ್ರಸ್ತೆ ಹೇಗೆ ವ್ಯವಹರಿಸುತ್ತಾಳೆ ಎಂಬುದನ್ನು ದೇಶವೂ ನೋಡಲಿ. ಸಲ್ಮಾನ್ ಖಾನ್ ದಯವಿಟ್ಟು ಈ ಬಗ್ಗೆ ಏನಾದರೂ ಮಾಡಿ" ಎಂದು ಟ್ವೀಟ್‌ನಲ್ಲಿ ಬಾಲಿವುಟ್ ನಟ ಸಲ್ಮಾನ್ ಖಾನ್‌ಗೆ ಟ್ಯಾಗ್ ಮಾಡಿದ್ದಾರೆ.
PublicNext
11/10/2022 02:59 pm