ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಶ್ರೀಲೀಲಾ ತಾಯಿ ವಿರುದ್ಧ ಮತ್ತೊಂದು ದೂರು

ಬೆಂಗಳೂರು: ಬಹುಭಾಷಾ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಇನ್ನು ಈ ಭಾರೀ ದೂರು ಕೊಟ್ಟಿದ್ದು ಸ್ವರ್ಣಲತಾರ ಪತಿ ಸುಭಾಕರ್ ರಾವ್.ಸದ್ಯ ಸ್ವರ್ಣಲತಾ ಹಾಗೂ ಸುಭಾಕರ್ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದೆ. ಇಪ್ಪತ್ತು ವರ್ಷಗಳಿಂದ ಈ ಜೋಡಿ ಬೇರೆ ಬೇರೆಯಾಗಿ ವಾಸವಾಗಿ ಡಿವೋರ್ಸ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದರು.

ಈಗ ಸ್ವರ್ಣಲತಾ ಕೋರಮಂಗಲದಲ್ಲಿರುವ ಸುಭಾಕರ್ ರಾವ್ ಅವರ ಅಪಾರ್ಟ್ಮೆಂಟ್ ನಲ್ಲಿರುವ ಮನೆಯ ಬೀಗ ಮುರಿದು ಅಕ್ರಮವಾಗಿ ಒಳಪ್ರವೇಶ ಮಾಡಿದ್ದಾರೆ. ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ.ಕಳೆದ ತಿಂಗಳು ಸ್ವರ್ಣಲತಾ ವಿರುದ್ಧ ಆನೇಕಲ್ ಪೊಲೀಸ್ ಠಾಣೆ ಯಲ್ಲೂ FIR ಆಗಿದೆ. ಅಲಯನ್ಸ್ ಯೂನಿವರ್ಸಿಟಿ ಗಲಾಟೆಯಲ್ಲಿ ಸ್ವರ್ಣಲತಾ ಆರೋಪಿ ನಂಬರ್ 2 ಆಗಿದ್ದಾರೆ. ಸದ್ಯ ಅಲಯನ್ಸ್ ವಿವಿ ಗಲಾಟೆಯಲ್ಲಿ ಸ್ವರ್ಣಲತಾ ಬೇಲ್ ಪಡೆದು ಹೊರಗಿದ್ದಾರೆ.

Edited By : Nirmala Aralikatti
PublicNext

PublicNext

05/10/2022 02:05 pm

Cinque Terre

60.82 K

Cinque Terre

0