ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಚಂದನವನದ ಬುಲ್ ಬುಲ್ ಬೆಡಗಿಗೆ ಅಭಿಮಾನಿಗಳು , ತಾರೆಯರು ಆಪ್ತರು ಸೋಷಿಯಲ್ ಮೀಡಿಯಾ ಮೂಲಕ ಶುಭಾಷಯ ಕೋರಿದ್ದಾರೆ.ಹೌದು ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು 30ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಚ್ಚು ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ನೆಚ್ಚಿನ ನಟಿಗೆ ಶುಭ ಹಾರೈಸಿದ್ದಾರೆ. ಇನ್ನು ಅಭಿಮಾನಿಗಳ ಜೊತೆ ರಚಿತಾ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು ರಚಿತಾ ರಾಮ್. ಆನಂತರ ಸಿನಿಮಾ ರಂಗಕ್ಕೆ ಎಂಟ್ರೀ ಕೊಟ್ಟು ತಮ್ಮದೇ ಛಾಪು ಮೂಡಿಸಿದ್ದಾರೆ.
PublicNext
03/10/2022 06:27 pm