ನವದೆಹಲಿ : 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಹಿರಿಯ ನಟಿ ಆಶಾ ಪರೇಖ್ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಆಶಾ ಪ್ರಶಸ್ತಿ ಸ್ವೀಕರಿಸಿ ಸಂಭ್ರಮವನ್ನು ಹಂಚಿಕೊಂಡರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭಾರತ ಸರ್ಕಾರದ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. 2019ನೇ ಸಾಲಿನ ಪ್ರಶಸ್ತಿಯು ರಜನಿಕಾಂತ್ ಅವರಿಗೆ ಸಿಕ್ಕಿತ್ತು. 2020ನೇ ವರ್ಷದ ದಾದಾ ಸಾಹೇಬ್ ಪ್ರಶಸ್ತಿಯನ್ನು ಆಶಾ ಪಾರೇಖ್ ಅವರು ಇಂದು ಸ್ವೀಕರಿದರು.
ಭಾರತೀಯ ಚಿತ್ರಕ್ಕೆ ಆಶಾ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ‘ಪದ್ಮಶ್ರೀ’, ‘ಫಿಲ್ಮ್ಫೇರ್’ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಅವುಗಳ ಸಾಲಿಗೆ ಈಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಸೇರ್ಪಡೆ ಆಗಿದೆ.
PublicNext
30/09/2022 07:07 pm