ನಟಿ ದೀಪಿಕಾ ಪಡುಕೋಣೆ ಅವರಿಗೆ ಆರೋಗ್ಯ ಕೈ ಕೊಟ್ಟಿದೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು ಅಭಿಮಾನಿಗಳು ನಿರಾಳರಾಗಿದ್ದಾರೆ. ಅಷ್ಟರಲ್ಲಾಗಲೇ ಇನ್ನೊಂದು ಶಾಕಿಂಗ್ ವಿಚಾರ ಹರಿದಾಡಲು ಆರಂಭಿಸಿದೆ.
ಪತಿ ರಣವೀರ್ ಸಿಂಗ್ ಜೊತೆಗಿನ ದಾಂಪತ್ಯಕ್ಕೆ ದೀಪಿಕಾ ಅಂತ್ಯ ಹಾಡಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆಲ್ಲ ಕಾರಣ ಆಗಿರುವುದು ಒಂದೇ ಒಂದು ಟ್ವೀಟ್. ‘ಬ್ರೇಕಿಂಗ್! ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಎಲ್ಲವೂ ಸರಿ ಇಲ್ಲ’ ಎಂದು ಉಮೈರ್ ಸಂಧು ಅವರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ನೋಡಿ ಅಭಿಮಾನಿಗಳಿಗೆ ಶಾಕ್ ಆಗಿದೆ.
ಅಷ್ಟಕ್ಕೂ ಯಾರು ಈ ಉಮೈರ್ ಸಂಧು.. ಇವ್ರು ವಿದೇಶಿ ಸೆನ್ಸಾರ್ ಮಂಡಳಿಯಲ್ಲಿ ಉಮೈರ್ ಸಂಧು ಸದಸ್ಯನಾಗಿದ್ದಾರೆ. ಭಾರತದ ಸಿನಿಮಾಗಳನ್ನು ಅವರು ವಿಮರ್ಶೆ ಮಾಡುತ್ತಾರೆ. ಆ ಮೂಲಕ ಅವರು ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಫೇಮಸ್ ಆಗಿದ್ದಾರೆ.
ಅವರ ಖಾತೆಯನ್ನು ಸಿನಿಪ್ರಿಯರು ಫಾಲೋ ಮಾಡುತ್ತಾರೆ. ಈಗ ಏಕಾಏಕಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸಂಸಾರದ ಬಿರುಕಿನ ಬಗ್ಗೆ ಉಮೈರ್ ಸಂಧು ಟ್ವೀಟ್ ಮಾಡಿರುವುದು ಫ್ಯಾನ್ಸ್ ಆತಂಕಕ್ಕೆ ಕಾರಣ ಆಗಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ರಣವೀರ್ ಸಿಂಗ್ ಅವರಿಗೆ ನೇರವಾಗಿ ಪ್ರಶ್ನೆ ಮಾಡಲಾಗಿದೆ. ‘ನಾನು ಮತ್ತು ದೀಪಿಕಾ ಪಡುಕೋಣೆ 2012ರಲ್ಲಿ ಡೇಟಿಂಗ್ ಮಾಡಲು ಆರಂಭಿಸಿದೆವು. 2022ಕ್ಕೆ ಹತ್ತು ವರ್ಷ ಆಯ್ತು’ ಎಂದು ಹೇಳುವ ಮೂಲಕ ತಾವಿಬ್ಬರೂ ಇನ್ನೂ ಅನ್ಯೋನ್ಯವಾಗಿಯೇ ಇದ್ದೇವೆ ಎಂದು ರಣವೀರ್ ಸಿಂಗ್ ಹೇಳಿದ್ದಾರೆ. ಆ ಉತ್ತರ ಕೇಳಿ ಅಭಿಮಾನಿಗಳಿಗೆ ಸಮಾಧಾನ ಆಗಿದೆ.
ಇನ್ನು ರಣವೀರ್ ಸಿಂಗ್ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತು. ಅದನ್ನು ಸ್ವೀಕರಿಸುವಾಗ ವೇದಿಕೆ ಮೇಲೆ ದೀಪಿಕಾರನ್ನೂ ಕರೆದರು. ‘ನನ್ನ ಯಶಸ್ಸಿನ ಗುಟ್ಟು ನನ್ನ ಪತ್ನಿ ದೀಪಿಕಾ ಪಡುಕೋಣೆ’ ಎಂದು ರಣವೀರ್ ಹೇಳಿದ್ದ ವಿಡಿಯೋ ತುಣುಕು ವೈರಲ್ ಆಗಿತ್ತು. ಈಗ ಇಬ್ಬರೂ ಬೇರೆ ಆಗುತ್ತಾರೆ ಎಂದು ಹರಡಿದ ಗಾಸಿಪ್ಗೆ ಸದ್ಯ ದೀಪಿಕಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.
PublicNext
29/09/2022 02:53 pm