ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ಪುತ್ರಿ ಐರಾ ಖಾನ್ ತಮ್ಮ ಪ್ರೇಮಿ ಫಿಟ್ನೆಸ್ ಟ್ರೈನರ್ ನೂಪುರ್ ಶಿಖರೆ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.ಕಳೆದ ಎರಡು ವರ್ಷಗಳಿಂದ ಇರಾ ಹಾಗೂ ನೂಪುರ್ ಡೇಟಿಂಗ್ ಮಾಡುತ್ತಿದ್ದರು. ಇದನ್ನು ಇಬ್ಬರೂ ಮುಚ್ಚಿಟ್ಟಿಲ್ಲ. ನೂಪುರ್ ಜತೆ ಇರುವ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಇರಾ ಹಂಚಿಕೊಳ್ಳುತ್ತಲೇ ಬಂದಿದ್ದರು. ಈಗ ಇಬ್ಬರೂ ಅಧಿಕೃತವಾಗಿ ಎಂಗೇಜ್ ಆಗಿದ್ದಾರೆ.
ಈ ವಿಡಿಯೋವನ್ನು ಇರಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇರಾಗೆ ನೂಪುರ್ ಉಂಗುರ ನೀಡಿ ಪ್ರಪೋಸ್ ಮಾಡಿದ್ದಾರೆ.ಕೆಲ ದಿನಗಳ ಹಿಂದೆ ಸೈಕ್ಲಿಂಗ್ ಸ್ಪರ್ಧೆಗಾಗಿ ವಿದೇಶಕ್ಕೆ ತೆರಳಿದ್ದ ನೂಪುರ್ ಶಿಖರೆ ಜೊತೆ ಐರಾ ಖಾನ್ ಕೂಡ ಹೋಗಿದ್ದರು. ಇದೇ ವೇಳೆ ಸ್ಪರ್ಧೆ ಬಳಿಕ ಐರಾ ಖಾನ್ ಗೆ ಪ್ರೇಮ ನಿವೇದನೆ ಮಾಡಿದ ನೂಪುರ್, ರಿಂಗ್ ಕೂಡ ತೊಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಂದ್ಹಾಗೆ ಐರಾ ಖಾನ್, ಆಮಿರ್ ಅವರ ಮೊದಲ ಪತ್ನಿ ರೀನಾ ದತ್ತಾರ ಮಗಳು. ಆಮಿರ್-ರೀನಾಗೆ ಜುನೈದ್ ಎಂಬ ಮಗ ಕೂಡ ಇದ್ದಾನೆ.
PublicNext
23/09/2022 08:10 pm