ಹೈದರಾಬಾದ್ : ಬಾಲಿವುಡ್ ನಟಿಯರಾದ ರೆಜಿನಾ ಕ್ಯಾಸ್ಸಂದ್ರ ಮತ್ತು ನಿವೇತಾ ಥಾಮಸ್ ಬಿಡುಗಡೆಗೆ ಸಿದ್ಧವಾಗಿರುವ ಶಾಕಿನಿ ಡಾಕಿನಿ ಚಿತ್ರದ ಪ್ರಚಾರದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.
ಸಾಕಷ್ಟು ಮೀಡಿಯಾಗಳಲ್ಲಿ ಸಂದರ್ಶನಗಳಲ್ಲಿ ರೆಜಿನಾ, ನಿವೇತಾ ಭಾಗಿವಹಿಸಿ ಡಾಕಿನಿ ಶಾಕಿನಿ ಚಿತ್ರದ ಚರ್ಚೆ ಪ್ರಮೋಷನ್ ಮಾಡ್ತಾ ಇದ್ದಾರೆ.
ಇದೀಗ ಇಂತಹುದೇ ಸಂದರ್ಶನದ ವೇಳೆ ರೆಜಿನಾ ಮಾಡಿರುವ ವಯಸ್ಕರ ಜೋಕ್ಸ್ ಒಂದು ಜಾಲತಾಣಗಳಲ್ಲಿ ವೈರಲ್ ಆಗಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.
ವಿಡಿಯೋ ಒಂದರಲ್ಲಿ ಮಾತನಾಡಿದ ರೆಜಿನಾ ನನ್ನ ಬಳಿ ಹೇಳಲು ಒಂದು ಜೋಕ್ಸ್ ಇದೆ, ಅದನ್ನು ನೀವು ಅರ್ಥ ಮಾಡಿಕೋಳ್ತಿರೋ ? ಇಲ್ಲವೋ ? ಗೊತ್ತಿಲ್ಲಾ ಎನ್ನುತ್ತಾ ಅದೇನಿದ್ದರೂ ಪುರುಷರು ಮತ್ತು ಮ್ಯಾಗಿ ಎರಡು ಕೂಡ ಒಂದೇ ಏಕೆಂದರೇ ಎರೆಡು ಕೂಡ ಎರಡೇ ನಿಮಿಷದಲ್ಲಿ ಮುಗಿಯುತ್ತದೆ ಎಂದಿದ್ದಾರೆ, ಈ ವೇಳೆ ರೆಜಿನಾ ಎದುರಿಗಿದ್ದ ನಿರೂಪಕ ಅರ್ಥ ಆಗಿಲ್ಲಾ ಎಂದಾಗ, ರೆಜಿನಾ ಕೊಟ್ಟ ಸುಳಿವು ತಿಳಿದ ಬಳಿಕ ವಿಷಯ ಅರ್ಥ ಮಾಡಿಕೊಂಡ ನಿರೂಪಕ ಇರಿಸುಮರುಸಾಗಿದ್ದು ಕಂಡು ಬಂದಿದೆ.
ನಿವೇಥಾ ಥಾಮಸ್ ಕೂಡ ಈ ವೇಳೆ ರೆಜಿನಾ ಪಕ್ಕ ಕುಳಿತು, ರೆಜಿನಾ ಹೇಳಿದ ಜೋಕ್ಸ್ ಕೇಳಿ ನಕ್ಕಿದ್ದಾರೆ. ಈ ಜೋಕ್ಸ್ ಯಾಕೆ ಬಂತು ? ಅದರ ಹಿಂದಿನ ಸಂದರ್ಭ ಏನು ? ಎಂಬುದು ಮಾತ್ರ ತಿಳಿದಿಲ್ಲ ಸದ್ಯ ಕೇವಲ 15 ಸೆಕೆಂಡ್ ವಿಡಿಯೋ ಮಾತ್ರ ವೈರಲ್ ಆಗಿದ್ದು ಇದನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆಯಾ ? ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ರೇ ಈ ವಿಡಿಯೋ ಕಾಮೆಂಟ್'ಗಳ ಸುರಿಮಳೆ ವ್ಯಕ್ತವಾಗಿದೆ.
PublicNext
10/09/2022 04:33 pm