ಭಕ್ತಿಪ್ರದಾನ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಸಾಯಿಪ್ರಕಾಶ್ ಅವರು ವಿಶ್ವರೂಪಿಣಿ ಹುಲಿಗೆಮ್ಮ ಸಿನಿಮಾಗೆ ಆಕ್ಷನ್ ಕಟ್ ಹೆಳಿದ್ದಾರೆ.
‘ವಿಶ್ವರೂಪಿಣಿ ಹುಲಿಗೆಮ್ಮ’ ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ಕೊಪ್ಪಳ ತಾಲ್ಲೂಕಿನ ಶ್ರೀಹುಲಿಗೆಮ್ಮ ದೇವಸ್ಥಾನದಲ್ಲಿ ನೆರವೇರಿತು.
Rಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಕುರಿತಂತೆ ಮಾತನಾಡಿದ ಅವರು, ಹುಲಿಗೆಮ್ಮ ದೇವಿಯ ಮಹಿಮೆ ಬಹಳ ದೊಡ್ಡದು, ಭಕ್ತರು ಬೇಡಿದ್ದನ್ನು ಕರುಣಿಸುವ ಆ ತಾಯಿಯ ಚಿತ್ರಕ್ಕೆ ನನ್ನನ್ನು ಆಯ್ಕೆಮಾಡಿದ್ದು ತುಂಬಾ ಸಂತೋಷವಾಗಿದೆ, ಮೊದಲಬಾರಿಗೆ ನಾನು ಭಕ್ತಿಪ್ರದಾನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದೂ ಸಾಯಿಪ್ರಕಾಶ್ ಅವರು ಚಿತ್ರವನ್ನು ನಿರ್ದೇಶಿಸುತ್ತಿರುವುದು ಇನ್ನೂ ಖುಷಿಯಾಗಿದೆ ಎಂದು ಹೇಳಿದರು.
ನಂತರ ನಿರ್ದೇಶಕ ಸಾಯಿಪ್ರಕಾಶ್ ಮಾತನಾಡುತ್ತ ಇದು ನನ್ನ ನಿರ್ದೇಶನದ 105ನೇ ಚಿತ್ರ.
PublicNext
25/08/2022 09:40 pm