ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳನ್ನು ಗ್ಲಾಮರಸ್ ಆಗಿ ಕಾಣಿಸಲು ನನಗಿಷ್ಟವಿಲ್ಲ: ನಿರ್ದೇಶಕ ಓಪ್ರಕಾಶ್

ಬೆಂಗಳೂರು: ನಟ ಓಂಪ್ರಕಾಶ್ ಎಂದರೆ ಚಂದನವನದಲ್ಲಿ ಒಬ್ಬ ಯಶಸ್ವಿ ನಿರ್ದೇಶಕ. ನಿರ್ಮಾಪಕರಾಗಿಯೂ ಅವರು ಗೆದ್ದಿದ್ದಾರೆ. ಏನೇನೂ ಇಲ್ಲದೇ ಚಿತ್ರರಂಗಕ್ಕೆ ಬಂದ ಅವರು ಜನರ ಪ್ರೀತಿ, ಅಭಿಮಾನ ಜೊತೆಗೆ ಹಣವನ್ನೂ ಗಳಿಸಿದರು. ಹುಚ್ಚ, ಎಕೆ 47, ಕಲಾಸಿಪಾಳ್ಯದಂತಹ ಹಿಟ್ ಸಿನಿಮಾಗಳನ್ನು ನೀಡಿದರು. ಡಕೋಟಾ ಎಕ್ಸ್‌ಪ್ರೆಸ್ ಸಿನಿಮಾ ಮೂಲಕ ನಟನೆಗೂ ಸೈ ಎಂದರು. ಬಳಿಕ ರೇಖಾದಾಸ್ ಅವರನ್ನು ಇಷ್ಟಪಟ್ಟ ಕಾರಣ ಮದುವೆಯಾಗುವಂತೆ ಕೇಳಿದ್ದಾರೆ. ಆದರೆ ಮೊದ ಮೊದಲು ರೇಖಾದಾಸ್ ನಿರಾಕರಿಸಿದರು. ಬಳಿಕ ಓಂ ಪ್ರಕಾಶ್ ಅವರ ಬಲವಂತಕ್ಕೆ ಮಣಿದು ಇಬ್ಬರು ಒಪ್ಪಿ ಮದುವೆಯಾದರು. ಇವರಿಬ್ಬರಿಗೆ ಮುದ್ದಾದ ಹೆಣ್ಣು ಮಗು ಶ್ರಾವ್ಯಾ ರಾವ್ ಜನಿಸಿದರು. ಶ್ರಾವ್ಯಾ ಕೂಡ ಸಿನಿರಂಗದಲ್ಲಿ ಚಿರಪರಿಚಿತರು.

ಮದುವೆಯಾದ ಕೆಲ ಸಮಯದಲ್ಲೇ ಮನೆ ಜವಾಬ್ದಾರಿ ತೆಗೆದುಕೊಳ್ಳದ ಓಂ ಪ್ರಕಾಶ್ ಅವರು ರೇಖಾದಾಸ್ ಅವರಿಂದ ದೂರ ಉಳಿದರು. ನಂತರದ ದಿನಗಳಲ್ಲಿ ಇಬ್ಬರೂ ಡಿವೋರ್ಸ್ ಪಡೆದರು. ಆದರೆ ಆಗಲೇ ರೇಖಾ ದಾಸ್ ಗರ್ಭಿಣಿಯಾಗಿ ನಟಿ ಶ್ರಾವ್ಯಾ ರಾವ್‌ಗೆ ತಾಯಿಯಾಗಿದ್ದರು. ತಂದೆ-ತಾಯಿ ಪ್ರೀತಿಯಿಂದ ವಂಚಿತರಾದ ಶ್ರಾವ್ಯಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರೂ, ಹೇಳಿಕೊಳ್ಳುವಂತಹ ಹೆಸರು ಮಾಡಲು ಸಾಧ್ಯವಾಗಲಿಲ್ಲ. ಇತ್ತ ಓಂಪ್ರಕಾಶ್ ಅವರು, 2002 ರಲ್ಲಿ ಭವ್ಯಾ ಪ್ರೇಮಯ್ಯ ಎಂಬುವವರನ್ನು ವಿವಾಹವಾದರು. 2012 ರಲ್ಲಿ ಡೆನಿಸ್ಸಾ ಎಂಬುವವರನ್ನು ವಿವಾಹವಾಗಿದ್ದಾರೆ. ಸದ್ಯ ಓಂ ಪ್ರಕಾಶ್ ಅವರು, ತಮ್ಮ ಮೂರನೆಯ ಪತ್ನಿ ಜೊತೆಗೆ ವಾಸವಿದ್ದಾರೆ. ಅವರಿಗೆ ಒಟ್ಟು 4 ಜನ ಮಕ್ಕಳಿದ್ದಾರೆ.

ಇನ್ನು ಇತ್ತೀಚೆಗೆ ಸಂದರ್ಶನ ನೀಡಿರುವ ಓಂಪ್ರಕಾಶ್‌ ಅವರು ರೇಖಾದಾಸ್ ಹಾಗೂ ತಮ್ಮ ಮಗಳು ಶ್ರಾವ್ಯ ಬಗ್ಗೆ ಮಾತನಾಡಿದ್ದಾರೆ. ರೇಖಾದಾಸ್ ಅವರಿಗೆ ನನ್ನಿಂದ ಅನ್ಯಾಯವೇನು ಆಗಿಲ್ಲ ಎಂಬಂತೆ ಮಾತನಾಡಿದ್ದು, ಮಗಳು ಶ್ರಾವ್ಯ ಸಿನಿರಂಗದಲ್ಲಿ ಬೆಳೆಯದಿರಲು ಕಾರಣವನ್ನು ತಿಳಿಸಿದ್ದಾರೆ. ನನ್ನ ಮಗಳು ಶ್ರಾವ್ಯಳನ್ನ ಗ್ಲಾಮರಸ್ ಆಗಿ ತೋರಿಸಲು ನನಗಾಗಲ್ಲ. ಹಾಗಾಗಿ ಅವಳಿಗೆ ಚಿತ್ರರಂಗದಲ್ಲಿ ಯಶಸ್ಸು ಕಾಣಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

22/08/2022 10:02 pm

Cinque Terre

63.4 K

Cinque Terre

1