ಬಾಲಿವುಡ್ ನಟ ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಸಿನಿಮಾಗೆ ಜನರಿಂದ ವಿರೋಧ ವ್ಯಕ್ತವಾಗಿದ್ದು, ಚಿತ್ರಕ್ಕೆ ಬಹಿಷ್ಕಾರದ ಬಿಸಿ ತಟ್ಟಿದೆ. ಇದರ ನಡುವೆಯೂ ಈ ಸಿನಿಮಾ ಆಸ್ಕರ್ ಸಂಸ್ಥೆಯ ಗಮನ ಸೆಳೆದಿದೆ. ಇದರಿಂದ ಆಮಿರ್ ಖಾನ್ ಅಭಿಮಾನಿಗಳು ಖುಷಿ ಆಗಿದ್ದಾರೆ.
ಈಗಾಗಲೇ ತಿಳಿದಿರುವಂತೆ ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಸಿನಿಮಾದ ಹಿಂದಿ ರಿಮೇಕ್ ಆಗಿ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೂಡಿಬಂದಿದೆ. ಇಂಗ್ಲಿಷ್ನಲ್ಲಿ ಟಾಮ್ ಹ್ಯಾಂಕ್ಸ್ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್ ಮಾಡಿದ್ದಾರೆ. 1994ರಲ್ಲಿ ತೆರೆಕಂಡ ‘ಫಾರೆಸ್ಟ್ ಗಂಪ್’ ಚಿತ್ರ 6 ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು.
‘ಫಾರೆಸ್ಟ್ ಗಂಪ್’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಿರುವ ರೀತಿಗೆ ಆಸ್ಕರ್ ಸಂಸ್ಥೆ (ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್) ಮನಸೋತಿದೆ. ಅದರ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಎರಡೂ ಸಿನಿಮಾದ ಕೆಲವು ದೃಶ್ಯಗಳು ಹಂಚಿಕೊಳ್ಳಲಾಗಿದೆ.
PublicNext
13/08/2022 07:58 pm