ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ಈಗ ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಬೈಕ್ ನಲ್ಲಿ ಒಬ್ಬರೇ ಟ್ರಾವೆಲ್ ಮಾಡುತ್ತಾ ಹೊಸ ಜಾಗಗಳಿಗೆ ಭೇಟಿ ಕೊಡ್ತಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಂದನವನದ `ಡ್ರಾಮಾ’ ಚೆಲುವೆ ಸಿಂಧು ಲೋಕನಾಥ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಶೂಟಿಂಗ್ ಮಧ್ಯೆಯೂ ಟ್ರಾವೆಲಿಂಗ್ ನ್ನು ಅತೀ ಹೆಚ್ಚು ಇಷ್ಟ ಪಡುವ ಸಿಂಧು ಇದೀಗ ಸಿಕ್ಕಿಂಗೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿಂದ ಸಿಕ್ಕಂಗೆ ಒಬ್ಬರೇ ಜರ್ನಿ ಮಾಡಿ ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಿಂಧು ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
PublicNext
15/06/2022 04:14 pm