ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪುತ್ ಸಾವನ್ನಪ್ಪಿ ಇಂದಿಗೆ ಎರಡು ವರ್ಷ. ಎರಡನೇ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ರನ್ನ ನೆನಪಿಸಿಕೊಂಡು “Miss you every day “ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮೂಲಕ ಸುಶಾಂತ್ ಜೊತೆ ಇರುವ ಮೂರು ಫೋಟೋಗಳನ್ನ ಹಾಕಿ, ಮಾಜಿ ಗೆಳೆಯನನ್ನ ನೆನಪಿಸಿಕೊಂಡಿದ್ದಾರೆ.
2020 ಜೂನ್ ನಲ್ಲಿ ಮುಂಬೈನ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ 34 ವರ್ಷದ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ರಿಯಾ ಚಕ್ರವರ್ತಿಯಿಂದ ದೂರವಾಗಿ ಒಂದು ತಿಂಗಳ ಅವಧಿಯಲ್ಲಿ ಸುಶಾಂತ್ ಸಿಗ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
PublicNext
14/06/2022 05:12 pm